ಚಿಕ್ಕಜಾಜೂರು: ಜುಲೈ ತಿಂಗಳ ಆರಂಭದಿಂದ ನಿರಂತರ ಮಳೆಯಾಗುತ್ತಿದ್ದು, ಶನಿವಾರ ಬೃಹತ್ ಮರದ ಕೊಂಬೆಯೊಂದು ಉರುಳಿ ಬಿದ್ದ ಪರಿಣಾಮ ಮರದ ಕೆಳಗೆ ನಿಲ್ಲಿಸಿದ್ದ ಬೈಕ್‌ಗೆ ಹಾನಿಯಾಗಿದೆ.
ಸಮೀಪದ ಹೋಬಳಿ ಕೇಂದ್ರವಾದ ಬಿ. ದುರ್ಗ ಗ್ರಾಮದ ಬಸ್ ನಿಲ್ದಾಣದ ಬಳಿ ಇರುವ ಅಮ್ಮನಕಟ್ಟೆಯ ಬೇವಿನ ಮರದ ಬೃಹತ್ ಕೊಂಬೆ ಶನಿವಾರ ಬೆಳಿಗ್ಗೆ 7.40 ರ ಸುಮಾರಿನಲ್ಲಿ ಉರುಳಿ ಬಿದ್ದಿದೆ.
ಅದೃಷ್ಟವಶಾತ್ ಈ ಸಮಯದಲ್ಲಿ ಸಂಚಾರ ವಿರಳ ಇದ್ದುದರಿಂದ ಜೀವ ಹಾನಿಯಾಗಿಲ್ಲ. ಮರದ ಕೆಳಗೆ ನಿಲ್ಲಿಸಲಾಗಿದ್ದ ಬೈಕ್ ಮೇಲೆ ಕೊಂಬೆ ಬಿದ್ದಿದ್ದರಿಂದ ಬೈಕ್‌ಗೆ ಹಾನಿಯಾಗಿದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ಬಿ. ದುರ್ಗದಲ್ಲಿ ಜುಲೈ 1ರಿಂದ 19ರವರೆಗೆ ಒಟ್ಟು 147.3 ಮಿ.ಮೀ.ನಷ್ಟು ಮಳೆ ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.