ADVERTISEMENT

ನಿರಂತರ ಮಳೆಗೆ ಕೋಡಿ ಬಿದ್ದ ಕೆರೆಗಳು

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 15:50 IST
Last Updated 22 ಅಕ್ಟೋಬರ್ 2024, 15:50 IST
ಸೂಜಿಕಲ್ ಕೆರೆ ತುಂಬಿ ಕೋಡಿ ನೀರು ರಸ್ತೆ ಮೇಲೆ ಹರಿಯುತ್ತಿರುವುದು
ಸೂಜಿಕಲ್ ಕೆರೆ ತುಂಬಿ ಕೋಡಿ ನೀರು ರಸ್ತೆ ಮೇಲೆ ಹರಿಯುತ್ತಿರುವುದು   

ಶ್ರೀರಾಂಪುರ: ಸತತವಾಗಿ ಸುರಿದ ಮಳೆಗೆ ಇಲ್ಲಿಗೆ ಸಮೀಪದ ಐತಿಹಾಸಿಕ ಸೂಜಿಕಲ್ ಕೆರೆ ಹಾಗೂ ಕೈನಡು ಕೆರೆಗಳು ಕೋಡಿ ಬಿದ್ದಿವೆ. 

ನಿರಂತರವಾಗಿ ಸುರಿದ ಮಳೆಯಿಂದಾಗಿ ಹೋಬಳಿಯ ಕುರುಬರಹಳ್ಳಿ ಸಮೀಪದ ನಾಕಿಕೆರೆ ಹಾಗೂ ನಡುವನಹಳ್ಳಿ ಸಮೀಪದ ಕೆರೆ ಕೋಡಿ ಬಿದ್ದ ನಂತರ ಒಂದು ವಾರದ ವರೆಗೆ ಸೂಜಿಕಲ್ ಕೆರೆಗೆ ನೀರು ಹರಿದಿದ್ದು, ಸೂಜಿಕಲ್ ಕೆರೆ ಕೋಡಿ ಬಿದ್ದಿದೆ. 

ಈ ಕೆರೆಯ ನೀರು ಕೈನಡು ಕೆರೆಗೆ ಸೇರುತ್ತದೆ. ಅಲ್ಲಿಂದ ಗಂಜಿಕೆರೆಗೆ ಸಾಗುವ ನೀರು ವೇದಾವತಿ ನದಿ ಮೂಲಕ ವಾಣಿ ವಿಲಾಸ ಸಾಗರ ಜಲಾಶಯಕ್ಕೆ ಹರಿಯುತ್ತಿದೆ. ಈ ಕೆರೆಗಳು 2 ವರ್ಷಗಳ ಹಿಂದೆ ತುಂಬಿ ಕೋಡಿ ಹರಿದಿದ್ದವು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.