
ಧರ್ಮಪುರ: ‘ಆಧ್ಯಾತ್ಮಿಕತೆ ಮತ್ತು ಸಮಾಜ ಸುಧಾರಣೆಯ ಜೊತೆಗೆ ಸ್ವಾಮಿ ವಿವೇಕಾನಂದರಂತಹ ಮೇರು ವ್ಯಕ್ತಿಗಳನ್ನು ನಿರ್ಮಾಣ ಮಾಡುವಲ್ಲಿ ರಾಮಕೃಷ್ಣರ ಪರಮಹಂಸರ ಕೊಡುಗೆ ಅನನ್ಯ’ ಎಂದು ಮದ್ದಿಹಳ್ಳಿ ಸ್ವಾಮಿ ವಿವೇಕಾನಂದ ಸೇವಾ ಹಾಗೂ ಶೈಕ್ಷಣಿಕ ಟ್ರಸ್ಟ್ ಸದಸ್ಯ ಎಂ. ನಾಗರಾಜು ಅಭಿಪ್ರಾಯಪಟ್ಟರು.
ಸಮೀಪದ ಮದ್ದಿಹಳ್ಳಿಯಲ್ಲಿ ಸ್ವಾಮಿ ವಿವೇಕಾನಂದ ಸೇವಾ ಹಾಗೂ ಶೈಕ್ಷಣಿಕ ಟ್ರಸ್ಟ್ ವತಿಯಿಂದ ಗುರುವಾರ ನಡೆದ 191ನೇ ರಾಮಕೃಷ್ಣರ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಟ್ರಸ್ಟ್‌ನ ಉಪಾಧ್ಯಕ್ಷ ಶಿವಕುಮಾರ್, ನಾಗರಾಜ್, ಜಯಣ್ಣ, ಪವಿತ್ರಾ, ಗೌರಮ್ಮ, ಹನುಮಂತರಾಯ, ಜಗನ್ನಾಥ, ರಾಘವೇಂದ್ರ ಆಚಾರ್, ಜೀವನ್ ಗೌಡ, ಕೆಂಚಮ್ಮ, ಮಹಾದೇವಮ್ಮ, ಮಂಜಮ್ಮ , ಪ್ರಮೀಳಮ್ಮ, ಮಹಾಲಕ್ಷ್ಮಿ, ಜಯಮ್ಮ, ಈಶ್ವರಮ್ಮ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.