
ಚಿತ್ರದುರ್ಗ: ಬೆಂಗಳೂರಿನ ಪಟ್ಟಣಗೆರೆಯಲ್ಲಿ ಕೊಲೆಯಾಗಿದ್ದ ಚಿತ್ರದುರ್ಗದ ರೇಣುಕಸ್ವಾಮಿ ಅವರ ಸಮಾಧಿ ಸ್ಥಳ ಬುಧವಾರ ಅಸ್ತವ್ಯಸ್ತಗೊಂಡಿದೆ.
2024ರ ಜೂನ್ 8ರಂದು ನಡೆದಿದ್ದ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾಗೌಡ ಹಾಗೂ ಸಹಚರರು ಬಂಧಿತರಾಗಿದ್ದು, ವಿಚಾರಣೆ ನಡೆಯುತ್ತಿದೆ. ನಗರದ ಜೋಗಿಮಟ್ಟಿ ರಸ್ತೆಯ ವೀರಶೈವ ರುದ್ರಭೂಮಿಯಲ್ಲಿ ರೇಣುಕಸ್ವಾಮಿ ಅಂತ್ಯಕ್ರಿಯೆ ನಡೆಸಲಾಗಿತ್ತು.
ಸಮಾಧಿ ಸ್ಥಳದಲ್ಲಿ ರೇಣುಕಸ್ವಾಮಿ ಹೆಸರಿದ್ದ ನಾಮಫಲಕ ಅಸ್ತವ್ಯಸ್ತವಾಗಿ ಬಿದ್ದಿದ್ದು, ಕಿಡಿಗೇಡಿಗಳು ಧ್ವಂಸ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಆದರೆ, ರೇಣುಕಸ್ವಾಮಿ ಅವರ ತಂದೆ ಕಾಶಿನಾಥಯ್ಯ ಶಿವನಗೌಡರ್ ಅವರು, ‘ಪುತ್ರನ ಸಮಾಧಿಯನ್ನು ಯಾರೂ ಧ್ವಂಸ ಮಾಡಿಲ್ಲ. ವೀರಶೈವ ಸಮಾಜದಿಂದ ರುದ್ರಭೂಮಿಯ ಜಾಗದ ಸಮತಟ್ಟು ಕಾರ್ಯ ನಡೆದಿದೆ. ಇದಕ್ಕೆ ನಮ್ಮಿಂದ ತಕರಾರು ಇಲ್ಲ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.