ಸಿರಿಗೆರೆ: ಹೊಸಕೆರೆ ಸಮೀಪದ ಹಳ್ಳದ ಬಳಿ ಕಾರಿನಲ್ಲಿ ಅವಿತುಕೊಂಡು ದರೋಡೆಗೆ ಹೊಂಚು ಹಾಕಿದ್ದ ತಂಡವೊಂದನ್ನು ಸಿರಿಗೆರೆ ಪೊಲೀಸರು ಮಂಗಳವಾರ ಸಂಜೆ ಬಂಧಿಸಿದ್ದಾರೆ.
ಗ್ರಾಮಸ್ಥರ ಸುಳಿವು ಆಧರಿಸಿ ಸ್ಥಳಕ್ಕೆ ಬಂದ ಪೊಲೀಸರು ದರೋಡೆಗೆಂದು ಬಳಸಿದ ಕಾರು, ಅದರಲ್ಲಿ ಇದ್ದ ಮಾರಕಾಸ್ತ್ರಗಳು ಮತ್ತು ಕಾರದ ಪುಡಿಯನ್ನು ವಶಕ್ಕೆ ಪಡೆದಿದ್ದಾರೆ.
ತಂಡದಲ್ಲಿದ್ದ 5 ಜನರಲ್ಲಿ ಮೂವರು ಸಿಕ್ಕಿ ಬಿದ್ದಿದ್ದು, ಇಬ್ಬರು ತಲೆಮರೆಸಿಕೊಂಡಿದ್ದಾರೆ.
ದರೋಡೆಕೋರರು ಪ್ರಮುಖ ಅಡಿಕೆ ವ್ಯಾಪಾರಿಯೊಬ್ಬರು ಹಣ ಸಾಗಿಸುವ ಮಾಹಿತಿಯನ್ನು ತಿಳಿದುಕೊಂಡು ಹಣ ದರೋಡೆ ಮಾಡುವ ಉದ್ದೇಶ ಹೊಂದಿದ್ದರು ಎನ್ನಲಾಗಿದೆ.
ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಕಾರಿನ ಹಿಂಬದಿ ನಂಬರ್ ಪ್ಲೇಟ್‌ಗೆ ಸ್ಟಿಕರ್ ಮತ್ತು ಮುಂಭಾಗದ ಪ್ಲೇಟ್‌ಗೆ ಕೆಸರು ಮೆತ್ತಿ ನಂಬರ್ ಕಾಣದಂತೆ ಮಾಡಿದ್ದರು.
ಸಿರಿಗೆರೆ ಪೊಲೀಸ್ ಠಾಣೆಗೆ ಚಿತ್ರದುರ್ಗ ಡಿವೈಎಸ್‌ಪಿ ದಿನಕರ್ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.