ಹೊಸದುರ್ಗ: ತಾಲ್ಲೂಕಿನ ಹಿಂಡಿದೇವರ ಹಟ್ಟಿ ಗ್ರಾಮದ ಗಾಯತ್ರಿ ಹಾಗೂ ರಾಜಪ್ಪ ಅವರ ಪುತ್ರ ಮಲ್ಲೇಶ್ (12) ಕುರಿ ಮೇಯಿಸಲು ಹಿಂಡಿದೇವರಹಟ್ಟಿ ಹಾಗೂ ಬೇವಿನಹಳ್ಳಿ ಸಂಪರ್ಕ ರಸ್ತೆಯಲ್ಲಿ ಹೋಗುತ್ತಿರುವಾಗ ಹಿನ್ನೀರಿನಲ್ಲಿ ಕಾಲು ಜಾರಿ ಬಿದ್ದಿರುವ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಹಿಂಡಿದೇವರಹಟ್ಟಿ ಹಾಗೂ ಬೇವಿನಹಳ್ಳಿಯಲ್ಲಿ ಹೊಸದಾಗಿ ರಸ್ತೆ ನಿರ್ಮಿಸಲಾಗಿದೆ. ಇಲ್ಲಿ ಸಂಪರ್ಕ ಸೇತುವೆ ನಿರ್ಮಿಸುವ ಕಾರ್ಯ ನಡೆಯುತ್ತಿದ್ದು, ಕೆಲಸಗಾರರು ಓಡಾಡಲು ಚಿಕ್ಕಜಾಗ ಮಾಡಿಕೊಂಡಿದ್ದರು. ಅದೇ ಮಾರ್ಗದಲ್ಲಿ ತೆರಳುತ್ತಿದ್ದ ಬಾಲಕ ಪಕ್ಕಕ್ಕೆ ಜರುಗಿ, ಕಾಲು ಜಾರಿ ಹಿಂಡಿದೇವರಹಟ್ಟಿ ಸಮೀಪ ವಿವಿ ಸಾಗರದ ಹಿನ್ನೀರಿನಲ್ಲಿ ಬಿದ್ದಿದ್ದಾನೆ.
ಅಗ್ನಿಶಾಮಕ ಠಾಣೆ ಸಿಬ್ಬಂದಿ ಬಾಲಕನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದು, ರಾತ್ರಿ 7 ಗಂಟೆಯವರೆಗೂ ಪತ್ತೆಯಾಗಿಲ್ಲ.
ತಹಶೀಲ್ದಾರ್, ಬಿಇಒ, ಗ್ರಾಮ ಲೆಕ್ಕಾಧಿಕಾರಿ, ಶ್ರೀರಾಂಪುರ ಪೊಲೀಸ್ ಸಿಬ್ಬಂದಿ ಸಮ್ಮುಖದಲ್ಲಿ ಶೋಧಕಾರ್ಯ ನಡೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.