ADVERTISEMENT

ಸಿರಿಗೆರೆಯಲ್ಲಿ ಬೃಹತ್ ವೇದಿಕೆ ಸಜ್ಜು: ಶಿವಕುಮಾರ ಸ್ವಾಮೀಜಿಗೆ ಶ್ರದ್ಧಾಂಜಲಿ

ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಶ್ರದ್ಧಾಂಜಲಿ ಕಾರ್ಯಕ್ರಮ ನಾಳೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2022, 2:56 IST
Last Updated 19 ಸೆಪ್ಟೆಂಬರ್ 2022, 2:56 IST
ತರಳಬಾಳು ಬೃಹನ್ಮಠದ ಐಕ್ಯಮಂಟಪವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿರುವುದು.
ತರಳಬಾಳು ಬೃಹನ್ಮಠದ ಐಕ್ಯಮಂಟಪವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿರುವುದು.   

ಸಿರಿಗೆರೆ: ತರಳಬಾಳು ಮಠದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ 30ನೇ ಶ್ರದ್ಧಾಂಜಲಿ ಕಾರ್ಯಕ್ರಮವು ಸೆ.20ರಿಂದ 24ರವರೆಗೆ ನಡೆಯಲಿದ್ದು, ಸಿರಿಗೆರೆಯ ಗುರುಶಾಂತೇಶ್ವರ ಭವನದ ಮುಂಭಾಗದಲ್ಲಿ ಮಹಾಮಂಟಪ ಸಜ್ಜುಗೊಂಡಿದೆ.

ಪ್ರತಿದಿನದ ಸಭಾ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ತಂಡದಿಂದ ವಚನ ನೃತ್ಯ, ಜಾನಪದ ನೃತ್ಯ, ವಚನಗೀತೆ, ನಾಟಕ, ಭರತನಾಟ್ಯ ಪ್ರದರ್ಶನ ನಡೆಯಲಿದೆ. ಸಾರ್ವಜನಿಕರು ಕಾರ್ಯಕ್ರಮ ವೀಕ್ಷಿಸಲು ಎಲ್‌ಇಡಿ ಪರದೆ ವ್ಯವಸ್ಥೆ ಮಾಡಲಾಗಿದೆ.

ವೃದ್ಧರು, ಮಕ್ಕಳು, ದೂರದ ಪ್ರದೇಶಗಳ ಭಕ್ತರು ಮನೆಯಲ್ಲಿಯೇ ಕುಳಿತು ಯೂಟ್ಯೂಬ್ ಲೈವ್ ‘Taralabalu Math Sirigere ಇಲ್ಲಿ ವೀಕ್ಷಿಸಬಹುದಾಗಿದೆ.

ADVERTISEMENT

ಮಠದ ಸುತ್ತಲೂ ಶಿವಧ್ವಜ ರಾರಾಜಿಸುತ್ತಿದೆ. ಐಕ್ಯಮಂಟಪವನ್ನು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿದೆ. ಗ್ರಾಮದ ಸುತ್ತಲೂ ವಿದ್ಯುತ್ ದೀಪಗಳು, ಹಾಗೂ ನೀರಿನ ಕಾರಂಜಿ ಭಕ್ತರನ್ನು ಆಕರ್ಷಿಸಲು ಸಜ್ಜಾಗಿದೆ.

ರೈತರಿಗೆ ಕೃಷಿ ಉತ್ಪನ್ನಗಳ ಬಗ್ಗೆ ಮಾಹಿತಿ ಹಾಗೂ ಓದುಗರಿಗೆ ಪುಸ್ತಕ ಭಂಡಾರ ಹಾಗೂ ಇತರೆ ವಸ್ತುಗಳನ್ನು ಕೊಳ್ಳುವವರಿಗೆ ಸ್ಟಾಲ್‌ಗಳನ್ನು ನಿರ್ಮಿಸಲಾಗಿದೆ.

ಸಿರಿಗೆರೆ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ದಾವಣಗೆರೆ ಶಿವಸೈನ್ಯ ಯುವಕ ಸಂಘದಿಂದ ದಾಸೋಹ ಸೇವೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.