ADVERTISEMENT

ಭಗವಾನ್ ಮೇಲೆ ಮಸಿ, ಪ್ರಜಾಪ್ರಭುತ್ವ ಕಗ್ಗೊಲೆ: ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2021, 13:19 IST
Last Updated 5 ಫೆಬ್ರುವರಿ 2021, 13:19 IST
ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ   

ಹೊಸದುರ್ಗ: ‘ಲೇಖಕ ಪ್ರೊ. ಕೆ.ಎಸ್‌. ಭಗವಾನ್ ಅವರ ಮೇಲೆ ಮಸಿ ಎರಚಿದ ಆ ತಾಯಿ ತನ್ನ ವೃತ್ತಿ ಗೌರವಕ್ಕೇ ಚ್ಯುತಿ ತಂದುಕೊಂಡಂತೆ ಆಗಿದೆ. ಈ ಮೂಲಕ ಪ್ರಜಾಪ್ರಭುತ್ವದ ಮೇಲೆ ಕಗ್ಗೊಲೆ ಮಾಡಿದ್ದಾರೆ’ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

‘ಪ್ರಜಾಪ್ರಭುತ್ವದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲವೆಂದರೆ ಅದನ್ನು ಇನ್ನೆಲ್ಲಿಂದ ತರುವುದು? ಭಗವಾನ್ ಅವರ ವಿಚಾರಗಳು ಒಪ್ಪಿಗೆ ಆಗದಿದ್ದರೆ ಅವರ ವಿಚಾರಗಳನ್ನು ಮಾತು ಮತ್ತು ಬರಹದ ಮೂಲಕ ಪ್ರತಿಭಟಿಸಬೇಕು. ಅದು ಬಿಟ್ಟು ಅಡ್ಡದಾರಿ ಹಿಡಿದಿರುವುದು ಅಮಾನವೀಯ ಮತ್ತು ಖಂಡನಾರ್ಹ. ಇಂತಹವರ ಮೇಲೆ ಸರ್ಕಾರ ಶಿಸ್ತಿನ ಕ್ರಮ ಜರುಗಿಸಬೇಕು’ ಎಂದು ಸ್ವಾಮೀಜಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT