ADVERTISEMENT

‘ಅಸಮಾನತೆ ಬಿಟ್ಟು ಸಹೋದರತ್ವ ಪಾಲಿಸೋಣ’

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 16:02 IST
Last Updated 8 ಅಕ್ಟೋಬರ್ 2024, 16:02 IST
ಚಿತ್ರದುರ್ಗದ ಒನಕೆ ಓಬವ್ವ ಕ್ರೀಡಾಂಗಣದ ಮುಂಭಾಗದಿಂದ ಮಂಗಳವಾರ ಹೊರಟ ಸೌಹಾರ್ದ ಯಾತ್ರೆ
ಚಿತ್ರದುರ್ಗದ ಒನಕೆ ಓಬವ್ವ ಕ್ರೀಡಾಂಗಣದ ಮುಂಭಾಗದಿಂದ ಮಂಗಳವಾರ ಹೊರಟ ಸೌಹಾರ್ದ ಯಾತ್ರೆ   

ಚಿತ್ರದುರ್ಗ: ನೆಲಮೂಲ ಸಂಸ್ಕೃತಿ ಹೊಂದಿರುವ ಭಾರತದಲ್ಲಿ ಶಾಂತಿ ಸೌಹಾರ್ದತೆಯಿಂದ ಬದುಕುವ ವಾತಾವರಣ ಸೃಷ್ಟಿಯಾಗಬೇಕಿದೆ ಎಂದು ಕರ್ನಾಟಕ ಶಾಂತಿ ಮತ್ತು ಸೌಹಾರ್ದ ವೇದಿಕೆ ಅಧ್ಯಕ್ಷ ನರೇನಹಳ್ಳಿ ಅರುಣ್‌ ಕುಮಾರ್‌ ತಿಳಿಸಿದರು.

ನಗರದ ಒನಕೆ ಓಬವ್ವ ಕ್ರೀಡಾಂಗಣದ ಮುಂಭಾಗದ ಬುದ್ಧನ ಪ್ರತಿಮೆ ಬಳಿ ದಮ್ಮ ಸಾಂಸ್ಕೃತಿಕ ಕೇಂದ್ರ, ಕರ್ನಾಟಕ ಶಾಂತಿ ಮತ್ತು ಸೌಹಾರ್ದ ವೇದಿಕೆಯಿಂದ ಮಂಗಳವಾರ ಆಯೋಜಿಸಿದ್ದ ಸೌಹಾರ್ದ ಯಾತ್ರೆಯಲ್ಲಿ ಮಾತನಾಡಿದ ಅವರು, ‘ಅಸಮಾನತೆ, ಅಶಾಂತಿ ಹೋಗಲಾಡಿಸಿ ಎಲ್ಲರೂ ಪ್ರೀತಿ ಸಹೋದರತ್ವದಿಂದ ಬದುಕಬೇಕು. ಬುದ್ಧ, ಶರಣರು, ಸಾಧು ಸಂತರ ವಿಚಾರಗಳನ್ನು ಎಲ್ಲೆಡೆ ಬಿತ್ತಬೇಕಿದೆ. ದೇವಸ್ಥಾನ, ಚರ್ಚ್, ಮಸೀದಿಗಳಿಗೆ ಯಾತ್ರೆ ಸಂಚರಿಸಲಿದೆ’ ಎಂದರು.

‘ಎಲ್ಲ ಜಾತಿ ಧರ್ಮದವರು ಸೌಹಾರ್ದದಿಂದ ಇರುವುದಕ್ಕೆ ಭಾರತ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಪ್ರತಿ ಶಾಲಾ ಕಾಲೇಜುಗಳಲ್ಲಿ ವಾರಕ್ಕೊಂದು ದಿನವಾದರೂ ಶಾಂತಿ ಸೌಹಾರ್ಧತೆಯ ಸಂದೇಶ ನೀಡಬೇಕಿದೆ’ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್‌ ತಿಳಿಸಿದರು.

ADVERTISEMENT

ದಮ್ಮ ಸಾಂಸ್ಕೃತಿಕ ಕೇಂದ್ರದ ಆರ್.ವಿಶ್ವಸಾಗರ್‌, ಅನ್ನಪೂರ್ಣಮ್ಮ, ಬೀಬಿಜಾನ್‌, ನಾಗರತ್ನ, ಅರಣ್ಯಸಾಗರ್‌, ಫಾದರ್ ಅಲೆಕ್ಸಾಂಡರ್, ಚಂದ್ರಶೇಖರ್, ಮುರುಗನ್, ಅಬ್ದುಲ್ ರೆಹಮಾನ್, ದಾದಾಪೀರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.