ADVERTISEMENT

ರಾಮ ಮಂದಿರ ನಿರ್ಮಾಣ ತಂಡದಲ್ಲಿ ಚಳ್ಳಕೆರೆಯ ಸೀತಾರಾಂ : ಶ್ರೀರಾಮುಲು ಸಂತಸ

​ಪ್ರಜಾವಾಣಿ ವಾರ್ತೆ
Published 26 ಜನವರಿ 2021, 4:39 IST
Last Updated 26 ಜನವರಿ 2021, 4:39 IST
   

ಚಿತ್ರದುರ್ಗ: ರಾಮ ಮಂದಿರ ನಿರ್ಮಾಣದ ತಾಂತ್ರಿಕ ತಂಡದಲ್ಲಿ ಚಳ್ಳಕೆರೆಯ ಪ್ರೊ.ಟಿ.ಜಿ. ಸೀತಾರಾಮ್ ಅವರಿಗೆ ಸ್ಥಾನ ಸಿಕ್ಕಿರುವುದು ಜಿಲ್ಲೆಗೆ ಸಂದ ಗೌರವ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಹೆಮ್ಮೆ ವ್ಯಕ್ತಪಡಿಸಿದರು.

ಗಣರಾಜ್ಯೋತ್ಸವದ ಅಂಗವಾಗಿ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಮಂಗಳವಾರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವ, ಸಂವಿಧಾನದ ಶಕ್ತಿ ಎಂಬಂತೆ ಸಾಮಾನ್ಯ ವ್ಯಕ್ತಿಯ ಮಕ್ಕಳು ಐಎಎಸ್‌ ಅಧಿಕಾರಿ ಆಗುತ್ತಾರೆ. ನಮ್ಮಂಥ ಸಾಮಾನ್ಯರು ಮಂತ್ರಿಯಾಗಿದ್ದೇವೆ. ಇದಕ್ಕೆ ಸಂವಿಧಾನ ನೀಡಿದ ಬಾಬಾ ಸಾಹೇಬ್ ಅಂಬೇಡ್ಕರ್ ಕಾರಣ. ಗಣರಾಜ್ಯೋತ್ಸವ ಅಂದರೆ ಜನರ ಉತ್ಸವ ಎಂದು ಹೇಳಿದರು.

ADVERTISEMENT

ಕಾರ್ಯಕ್ರಮದಲ್ಲಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಎಸ್ಪಿ ರಾಧಿಕಾ ಮತ್ತಿತರರು ಇದ್ದರು‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.