ADVERTISEMENT

ಬಿರುಗಾಳಿ ಸಹಿತ ಧಾರಾಕಾರ ಮಳೆ: ಹಾರಿದ ಅಂಗಡಿ ಶೀಟ್‌ಗಳು

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2021, 5:02 IST
Last Updated 23 ಏಪ್ರಿಲ್ 2021, 5:02 IST
ಚಳ್ಳಕೆರೆಯಲ್ಲಿ ಗುರುವಾರ ಬಿರುಗಾಳಿ ಮಳೆಗೆ ಕಾಟಪ್ಪನಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್‌ ಮೇಲೆ ಬಿದ್ದ ಮರ
ಚಳ್ಳಕೆರೆಯಲ್ಲಿ ಗುರುವಾರ ಬಿರುಗಾಳಿ ಮಳೆಗೆ ಕಾಟಪ್ಪನಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್‌ ಮೇಲೆ ಬಿದ್ದ ಮರ   

ಚಳ್ಳಕೆರೆ: ಪಟ್ಟಣದ ಸುತ್ತಮುತ್ತ ಗುರುವಾರ ಅರ್ಧಗಂಟೆ ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿಯಿತು.

ಬಿರುಗಾಳಿ ಹಾಗೂ ಮಳೆಗೆ ಸಿಲುಕಿ ರಸ್ತೆ ಬದಿಯ ಗೂಡಂಗಡಿಯ ಶೀಟ್‌ಗಳು ತುಂಡಾಗಿ ನೆಲಕ್ಕೆ ಬಿದ್ದವು. ಕೆಲ ಅಂಗಡಿಯ ಸೂಪರ್ ಕವರ್, ನೆರಳಿನ ವ್ಯವಸ್ಥೆಗೆ ಮಾಡಿಕೊಟ್ಟಿದ್ದ ಬಿದಿರು ತಡಿಕೆ ಗಾಳಿಯಲ್ಲಿ ಹಾರಿ ಹೋದವು.

ಹಣ್ಣು, ತರಕಾರಿ ಪೆಟ್ಟಿಗೆ ಅಂಗಡಿಗಳು ರಸ್ತೆಗೆ ಉರುಳಿ ಬಿದ್ದವು. ಆದರೆ ಯಾವುದೇ ಅನಾಹುತ ಸಂಭವಿಸಲಿಲ್ಲ. ಚಳ್ಳಕೆರೆ ಕಲ್ಯಾಣದುರ್ಗದ ಮಾರ್ಗವಾಗಿ ಹೋಗುವ ಬಸ್ ಕಾಟಪ್ಪನಹಟ್ಟಿ ಬಳಿ ಕೆಸರಿನಲ್ಲಿ ಸಿಕ್ಕಿ ಹಾಕಿಕೊಂಡಿತ್ತು. ಹದ ಮಳೆ ಸುರಿದಿರುವ ಕಾರಣ ಮುಂಗಾರು ಕೃಷಿ ಚಟುವಟಿಕೆಗೆ ಅನುಕೂಲವಾಗಿದ್ದು, ರೈತರಲ್ಲಿ ಸಂತಸ ಮೂಡಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.