ADVERTISEMENT

ಕ್ರೀಡೆಗಳ ಬಗ್ಗೆ ನಿರ್ಲಕ್ಷ್ಯ ಸರಿಯಲ್ಲ: ಯೋಗೇಶ್‌ಬಾಬು

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 7:51 IST
Last Updated 23 ಆಗಸ್ಟ್ 2025, 7:51 IST
ಮೊಳಕಾಲ್ಮುರು ತಾಲ್ಲೂಕಿನ ಬಿ.ಜಿ.ಕೆರೆಯಲ್ಲಿ ಶುಕ್ರವಾರ ಆರಂಭವಾದ ವಲಯ ಮಟ್ಟದ ಪ್ರೌಢಶಾಲಾ ಕೀಡಾಕೂಟಕ್ಕೆ ಬಿ. ಯೋಗೇಶ್‌ಬಾಬು ಚಾಲನೆ ನೀಡಿದರು
ಮೊಳಕಾಲ್ಮುರು ತಾಲ್ಲೂಕಿನ ಬಿ.ಜಿ.ಕೆರೆಯಲ್ಲಿ ಶುಕ್ರವಾರ ಆರಂಭವಾದ ವಲಯ ಮಟ್ಟದ ಪ್ರೌಢಶಾಲಾ ಕೀಡಾಕೂಟಕ್ಕೆ ಬಿ. ಯೋಗೇಶ್‌ಬಾಬು ಚಾಲನೆ ನೀಡಿದರು   

ಮೊಳಕಾಲ್ಮುರು: ವಿದ್ಯಾರ್ಥಿ ಜೀವನದಲ್ಲಿ ಪಠ್ಯಕ್ಕೆ ನೀಡುವಷ್ಟು ಪ್ರಾಮುಖ್ಯತೆಯನ್ನು ಕ್ರೀಡೆಗಳಿಗೂ ನೀಡುವ ಅಗತ್ಯವಿದೆ. ಈ ಮೂಲಕ ಪರಿಪೂರ್ಣ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳಿಗೆ ಸಾಧ್ಯವಾಗಲಿದೆ ಎಂದು ರಾಜ್ಯ ದ್ರಾಕ್ಷಾರಸ ಹಾಗೂ ವೈನ್‌ ಬೋರ್ಡ್‌ ಅಧ್ಯಕ್ಷ ಬಿ. ಯೋಗೇಶ್‌ಬಾಬು ಹೇಳಿದರು. 

ತಾಲ್ಲೂಕಿನ ಬಿ.ಜಿ.ಕೆರೆಯ ಬಸವೇಶ್ವರ ಪ್ರೌಢಶಾಲೆ ಆವರಣದಲ್ಲಿ ಬುಧವಾರ ಆರಂಭವಾದ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. 

ಕ್ರೀಡೆಗಳಿಂದ ಮಾನಸಿಕ ಉಲ್ಲಾಸ ಪಡೆಯಬಹುದು, ದೈಹಿಕ ಆರೋಗ್ಯವು ಕ್ರೀಡೆಗಳಿಂದ ಸಾಧ್ಯವಿದೆ. ಹಲವು ಅನಾರೋಗ್ಯ ಸಮಸ್ಯೆಗಳಿಗೆ ಕ್ರೀಡೆಯೇ ಪರಿಹಾರವಾಗಿದೆ ಎಂದರು. 

ADVERTISEMENT

ಶಿಕ್ಷಣ ಸಂಯೋಜಕರಾದ ಮಂಜುನಾಥ್‌, ಲೋಹಿತ್‌ ಕುಮಾರ್‌, ದೈಹಿಕ ಶಿಕ್ಷಣ ಸಂಯೋಜಕ ಅಬ್ರಹಾಂ, ಮುಖ್ಯಶಿಕ್ಷಕರ ಸಂಘದ ಕಾರ್ಯದರ್ಶಿ ಡಿ.ವಿ. ಕೃಷ್ಭಮೂರ್ತಿ, ನೌಕರರ ಸಂಘದ ಗೌರವಾಧ್ಯಕ್ಷ ಎಸ್.ಬಿ. ರಾಮಚಂದ್ರಯ್ಯ, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿದ್ದಯ್ಯ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಶೋಕ್‌, ಉಪ ಪ್ರಾಂಶುಪಾಲರಾದ ರಾಜಣ್ಣ, ಷಣ್ಮುಖಪ್ಪ, ಸಿಆರ್‌ಪಿ ಖಾಲಿದ್‌ ಹುಸೇನ್‌, ಮುಜಾಮಿಲ್‌, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಎಸ್.ಕೆ. ಗಂಗಾಧರ್‌, ಮಹಾಂತೇಶ್‌, ಜಾಕೀರ್‌ ಹುಸೇನ್‌ ಮತ್ತು ಗ್ರಾಮದ ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.