ಹೊಸದುರ್ಗ: ಪಟ್ಟಣದ ಅಶೋಕ ರಂಗಮಂದಿರ ಸರ್ಕಾರಿ ಪ್ರಧಾನ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸೋಮವಾರ ಪೊಲೀಸ್ ಠಾಣೆಗೆ ಭೇಟಿ ನೀಡಿ, ಇಲಾಖೆ ಕಾರ್ಯ ವೈಖರಿಯನ್ನು ಕುತೂಹಲದಿಂದ ವೀಕ್ಷಿಸಿದರು.
ಪಿಎಸ್ಐ ಭೀಮನಗೌಡ ಪಾಟೀಲ್ ಮಾತನಾಡಿ, ಕಾನೂನಿನ ಅಡಿಯಲ್ಲಿ ಪ್ರತಿಯೊಬ್ಬರೂ ಸಮಾನರೇ. ನಮ್ಮ ದೇಶದಲ್ಲಿ ಪ್ರತಿಯೊಬ್ಬರಿಗೂ ಮೂಲ ಹಕ್ಕುಗಳಿದ್ದು, ಮತ್ತೊಬ್ಬರ ಹಕ್ಕುಗಳಿಗೆ ಧಕ್ಕೆ ಬಾರದಂತೆ ಮಾನವೀಯತೆಯಿಂದ ನಡೆದುಕೊಳ್ಳಬೇಕಿದೆ. ಯಾರಾದರೂ ದುರ್ನಡತೆ ತೋರಿದಾಗ, ಒಂಟಿಯಾಗಿದ್ದಾಗ, ಅಪರಿಚಿತರನ್ನು ಕಂಡಾಗ ಯಾವೆಲ್ಲಾ ಕ್ರಮಗಳನ್ನು ವಹಿಸಬೇಕು, ಮಕ್ಕಳಿಗೆ ಠಾಣೆಯಲ್ಲಿ ದೂರು ಸ್ವೀಕರಿಸುವುದು, ದೂರು ನೀಡುವುದು, ಅಪರಾಧಿಗಳಿಗೆ ಶಿಕ್ಷೆ ವಿಧಿಸುವುದು ಸೇರಿದಂತೆ ಹಲವು ಕಾರ್ಯಗಳ ಬಗ್ಗೆ ಸರಳವಾಗಿ ಮಕ್ಕಳಿಗೆ ಮಾಹಿತಿ ನೀಡಿದರು.
ಮುಖ್ಯಶಿಕ್ಷಕಿ ಲಕ್ಷ್ಮೀದೇವಿ, ಶಿಕ್ಷಕರಾದ ಪಾರ್ವತಮ್ಮ, ನಾಗರತ್ನಮ್ಮ, ಯಶೋಧಮ್ಮ, ಮಂಜುಳಾ, ವನಜಾಕ್ಷಿ ಮತ್ತು ವೆಂಕಟೇಶ್ ಸೇರಿದಂತೆ ಇಲಾಖೆ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.