ADVERTISEMENT

ಮೂಡಲ ಮುತ್ತಿನ ಕೆರೆಯಲ್ಲಿ ತೆಪ್ಪೋತ್ಸವ

ಹೊಸದುರ್ಗ ತಾಲ್ಲೂಕಿನ ಬಾಗೂರಿನಲ್ಲಿ ಚನ್ನಕೇಶವ ಸ್ವಾಮಿ

​ಪ್ರಜಾವಾಣಿ ವಾರ್ತೆ
Published 4 ಜನವರಿ 2023, 5:26 IST
Last Updated 4 ಜನವರಿ 2023, 5:26 IST
ಹೊಸದುರ್ಗದ ಬಾಗೂರಿನಲ್ಲಿ ಚನ್ನಕೇಶವ ಸ್ವಾಮಿ ತೆಪ್ಪೋತ್ಸವಕ್ಕೆ ಶಾಸಕ ಗೂಳಿಹಟ್ಟಿ ಡಿ. ಶೇಖರ್ ಚಾಲನೆ ನೀಡಿದರು.
ಹೊಸದುರ್ಗದ ಬಾಗೂರಿನಲ್ಲಿ ಚನ್ನಕೇಶವ ಸ್ವಾಮಿ ತೆಪ್ಪೋತ್ಸವಕ್ಕೆ ಶಾಸಕ ಗೂಳಿಹಟ್ಟಿ ಡಿ. ಶೇಖರ್ ಚಾಲನೆ ನೀಡಿದರು.   

ಹೊಸದುರ್ಗ: ತಾಲ್ಲೂಕಿನ ಬಾಗೂರಿನಲ್ಲಿ ನೆಲೆಸಿರುವ ಇತಿಹಾಸ ಪ್ರಸಿದ್ಧ ಚನ್ನಕೇಶವ ಸ್ವಾಮಿ ದೇವರ ತೆಪ್ಪೋತ್ಸವ ಮೂಡಲ ಮುತ್ತಿನ ಕೆರೆಯಲ್ಲಿ ಮಂಗಳವಾರ ಅದ್ಧೂರಿಯಾಗಿ ನಡೆಯಿತು. ತೆಪ್ಪೋತ್ಸವಕ್ಕೆ ಶಾಸಕ ಗೂಳಿಹಟ್ಟಿ ಡಿ.ಶೇಖರ್ ಚಾಲನೆ ನೀಡಿದರು.

ತೆಪ್ಪೋತ್ಸವ ಅಂಗವಾಗಿ ಪುಷ್ಪಗಳಿಂದ ಅಲಂಕರಿಸಿದ ಮಂಟಪ ಮನೋಹರವಾಗಿತ್ತು‌. ಈ ಮಂಟಪದಲ್ಲಿ ಚನ್ನಕೇಶವ ಸ್ವಾಮಿಯನ್ನು ನಾಗಾಭರಣ ಪೀಠದ ಮೇಲೆ ಇಟ್ಟು ಪ್ರಧಾನ
ಅರ್ಚಕರುಗಳಾದ ಶ್ರೀನಿವಾಸ್, ನರೋತ್ತಮ ಭಟ್ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ತೆಪ್ಪೋತ್ಸವ ಮೂಡಲ ಮುತ್ತಿನಕೆರೆಯಲ್ಲಿ
ಸಾಗಿತು.

ತೆಪ್ಪವನ್ನು ಗ್ರಾಮದ ಭಕ್ತರೇ ಡ್ರಂ, ಬಿದಿರು ಮರದ ಹಲಗೆಗಳಿಂದ ತಯಾರಿಸಿದ್ದರು. 25ಕ್ಕೂ ಅಧಿಕ ಜನ ಏಕಕಾಲದಲ್ಲಿ ತೆಪ್ಪದ ಮೇಲೆ ಸಾಗುವ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು.

ADVERTISEMENT

ತೆಪ್ಪದಲ್ಲಿ ದೇವರನ್ನು ಕೂರಿಸಿ ಕೆರೆಯ ಒಂದು ಸುತ್ತು ಸುತ್ತಲಾಯಿತು‌. ಕೆರೆಯ ದಡದಲ್ಲಿ ನಿಂತು ನೋಡುತ್ತಿದ್ದ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ
ಕಲ್ಪಿಸಲಾಗಿತ್ತು. ಮಂಗಳೂರು ಚನ್ನಕೇಶವ ಸ್ವಾಮಿ ಹಾಗೂ ಗಂಗಾಧರೇಶ್ವರ ಸ್ವಾಮಿ ದೇವಾಲಯಗಳನ್ನು ಹೂ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.

ಚನ್ನಕೇಶವ ಸ್ವಾಮಿ ದೇಗುಲಕ್ಕೆ ಸಮುದಾಯ ಭವನ ನಿರ್ಮಾಣ: ತಾಲ್ಲೂಕಿನ ಬಾಗೂರು ಚನ್ನಕೇಶವ ಸ್ವಾಮಿ ದೇವಾಲಯಕ್ಕೆ ಸಮುದಾಯ ಭವನ ನಿರ್ಮಿಸಲಾಗುವುದು ಎಂದು ಕೇಂದ್ರ ಸಚಿವ ನಾರಾಯಣಸ್ವಾಮಿ ಮಂಗಳವಾರ ಚನ್ನಕೇಶವ ಸ್ವಾಮಿ ದೇವಾಲಯದ ಸನ್ನಿಧಾನದಲ್ಲಿ ಭರವಸೆ ನೀಡಿದರು.

ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಅವರು ದೇವಾಲಯಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ಅವಶ್ಯವಿರುವ ಸಮುದಾಯ ಭವನ ನಿರ್ಮಿಸಲು ಹಾಗೂ ಮೂಲಭೂತ ಸೌಕರ್ಯ ಕಲ್ಪಿಸಲು ಅಗತ್ಯ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಸುತ್ತಮುತ್ತಲಿನ ಗ್ರಾಮಸ್ಥರು
ತೆಪ್ಪೋತ್ಸವದಲ್ಲಿ ಭಾಗಿಯಾಗಿ, ದೇವರಲ್ಲಿ ಸಂಕಲ್ಪ ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.