ADVERTISEMENT

ಪುನಃ ಪತ್ತೆಯಾದ ಕರಡಿ: ಬೋನ್ ಅಳವಡಿಕೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2023, 13:54 IST
Last Updated 19 ಜುಲೈ 2023, 13:54 IST
ಹೊಸದುರ್ಗದ ಕೈಗಾರಿಕಾ ಪ್ರದೇಶದಲ್ಲಿ ಕರಡಿ ಸೆರೆಗಾಗಿ ಬೋನ್ ಅಳವಡಿಸಲಾಗಿದೆ
ಹೊಸದುರ್ಗದ ಕೈಗಾರಿಕಾ ಪ್ರದೇಶದಲ್ಲಿ ಕರಡಿ ಸೆರೆಗಾಗಿ ಬೋನ್ ಅಳವಡಿಸಲಾಗಿದೆ   

ಹೊಸದುರ್ಗ: ಪಟ್ಟಣದ ಹುಳಿಯಾರ್ ರಸ್ತೆಯಲ್ಲಿನ ರೆಸಾರ್ಟ್ ಸಮೀಪ ಮಂಗಳವಾರ ಸಂಜೆ ಪುನಃ ಕರಡಿಗಳು ಪತ್ತೆಯಾಗಿದ್ದು, ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ.

ಸಾರ್ವಜನಿಕರು ಕರಡಿ ಪ್ರತ್ಯಕ್ಷ ಆಗಿರುವ ಬಗ್ಗೆ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದ, ಕೂಡಲೇ ಅರಣ್ಯ ಇಲಾಖೆಯವರು ಸ್ಥಳಕ್ಕೆ ಬಂದು, ಕರಡಿಗಳ ಸೆರೆಗಾಗಿ ಪಟ್ಟಣದ ಕೈಗಾರಿಕಾ ಪ್ರದೇಶದಲ್ಲಿ ಬೋನ್ ಅಳವಡಿಸಿದ್ದಾರೆ.

ಈ ಭಾಗದಲ್ಲಿ ನಿತ್ಯ ನೂರಾರು ಜನ ಓಡಾಡುತ್ತಿರುತ್ತಾರೆ. ಸಾಕಷ್ಟು ಮನೆ, ಅಂಗಡಿ, ವಾಣಿಜ್ಯ ಮಳಿಗೆಗಳು, ಅಗ್ನಿಶಾಮಕ ಠಾಣೆ, ಹೊಸ ಕೋರ್ಟ್, ವಿದ್ಯಾಸಂಸ್ಥೆ ಸೇರಿದಂತೆ ವಿವಿಧ ಕಾರ್ಯಗಳಿಗೆ ಹಲವಾರು ಜನರು ಸಂಚರಿಸುತ್ತಾರೆ. ಆದ್ದರಿಂದ ಕೂಡಲೇ ಕರಡಿಗಳ ಸೆರೆ ಹಿಡಿಯಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.