ಮೊಳಕಾಲ್ಮುರು: ನಾಶವಾಗುತ್ತಿರುವ ಪರಿಸರ ಉಳಿಸುವ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕಿದೆ. ಪೊಲೀಸರು ಸಹ ಇದಕ್ಕೆ ಹೊರತಾಗಿಲ್ಲ ಎಂದು ಸಿಪಿಐ ವಸಂತ್ ವಿ. ಆಸೋದೆ ಹೇಳಿದರು.
ಇಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಳಿ ಪೊಲೀಸ್ ವಸತಿಗೆ ಕಾಯ್ದಿರಿಸಿದ ಸ್ಥಳದಲ್ಲಿ ಭಾನುವಾರ ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶಕ್ಕೆ ಹೋಲಿಕೆ ಮಾಡಿದಲ್ಲಿ ಪಟ್ಟಣಗಳಲ್ಲಿ ಹಸಿರು ಕಾಣೆಯಾಗುತ್ತಿದೆ. ಕಟ್ಟಡಗಳ ನಿರ್ಮಾಣ ಭರಾಟೆಯಲ್ಲಿ ಗಿಡ, ಮರಗಳನ್ನು ಕಡಿಯುತ್ತಿದ್ದಾರೆ. ಪ್ರತಿ ಮನೆಯಲ್ಲೂ ಸಸಿ ನೆಡಲು ಕ್ರಮ ಕೈಗೊಳ್ಳದಿದ್ದಲ್ಲಿ ಭವಿಷ್ಯದಲ್ಲಿ ಹಲವು ಅನಾರೋಗ್ಯ ಸಮಸ್ಯೆಗಳನ್ನು ಎದುರಿಸುವುದು ಅನಿವಾರ್ಯವಾಗಲಿದೆ ಎಂದರು.
ಪಿಎಸ್‌ಐ ಜಿ. ಪಾಂಡುರಂಗಪ್ಪ, ಅರಣ್ಯ ಇಲಾಖೆಯ ಶಿವರಾಜ್, ಸಂತೋಷ್, ಪೊಲೀಸ್ ಸಿಬ್ಬಂದಿಗಳಾದ ರಾಘವೇಂದ್ರರೆಡ್ಡಿ, ಶ್ರೀಧರ್, ಸತೀಶ್, ಪ್ರಭು, ಶಿವಾನಂದ್, ಸುಧೀರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.