ADVERTISEMENT

ಕಳ್ಳನಿಗೆ ಎರಡೂವರೆ ವರ್ಷ ಜೈಲು ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2025, 6:37 IST
Last Updated 16 ಜುಲೈ 2025, 6:37 IST
<div class="paragraphs"><p>ತೀರ್ಪು</p></div>

ತೀರ್ಪು

   

ಹೊಳಲ್ಕೆರೆ: ಪಟ್ಟಣದ ಸಿದ್ದರಾಮಪ್ಪ ಬಡಾವಣೆಯಲ್ಲಿ ಕಳವು ಮಾಡಿದ ಸೈಯದ್ ಫಜಲ್ ಎಂಬುವನಿಗೆ ಇಲ್ಲಿನ ನ್ಯಾಯಾಲಯ 2 ವರ್ಷ, ಆರು ತಿಂಗಳು ಜೈಲು ಶಿಕ್ಷೆ ಹಾಗೂ ₹15,000 ದಂಡ ವಿಧಿಸಿ ಆದೇಶ ನೀಡಿದೆ.

2024ರ ಸೆ. 23ರಂದು ಪಟ್ಟಣದ ಸಿದ್ದರಾಮಪ್ಪ ಬಡಾವಣೆಯ 3ನೇ ಅಡ್ಡರಸ್ತೆಯಲ್ಲಿ ಸಂಜೀವಪ್ಪ ಎಂಬುವರ ಮನೆಯ ಬೀಗ ಮುರಿದು ₹ 80,000 ನಗದು, 10 ಗ್ರಾಂ ಆಭರಣ, ಬೆಳ್ಳಿಯ ಚೈನ್ ಸೇರಿ ₹ 1.47 ಲಕ್ಷ ಮೌಲ್ಯದ ಆಭರಣ ಕಳವು ಮಾಡಲಾಗಿತ್ತು.

ADVERTISEMENT

ಮಾಲೀಕರ ದೂರಿನ ಮೇಲೆ ಪೊಲೀಸರು ಹೊಸದುರ್ಗದ ಸೈಯದ್ ಫಸಲ್‌ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಮಾಲು ಸಮೇತ ವಶಪಡಿಸಿಕೊಂಡ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯ ಆರೋಪಿಗೆ ಶಿಕ್ಷೆ ವಿಧಿಸಿ ಆದೇಶ ನೀಡಿದೆ.

ಬಿಎನ್‌ಎಸ್ ಕಾಯ್ದೆ– 2023 ಜಾರಿಯಾದ ನಂತರ ಜಿಲ್ಲೆಯಲ್ಲಿ ಆರೋಪಿಗೆ ಶಿಕ್ಷೆಗೆ ಗುರಿಯಾದ ಪ್ರಥಮ ಪ್ರಕರಣ ಇದಾಗಿದೆ ಎಂದು ಪೊಲೀಸರು ತಿಳಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.