ADVERTISEMENT

ಶ್ರೀಗಂಧ ಕಳವು: ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2021, 13:08 IST
Last Updated 10 ಫೆಬ್ರುವರಿ 2021, 13:08 IST

ಚಿತ್ರದುರ್ಗ: ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿಯ ತರಳಬಾಳು ಶಾಖಾ ಮಠದ ಆವರಣದಲ್ಲಿ ಶ್ರೀಗಂಧ ಕಳವು ಮಾಡಿದ್ದ ಆರೋಪಿಗಳನ್ನು ಪತ್ತೆ ಮಾಡಿದ ಪೊಲೀಸರು, ಮೂವರನ್ನು ಬಂಧಿಸಿದ್ದಾರೆ.

ಹೊಸದುರ್ಗ ತಾಲ್ಲೂಕಿನ ಕಪ್ಪಗೆರೆ ಗ್ರಾಮದ ಲೊಕೇಶ (22), ಕೆಂಚಪ್ಪ (24) ಹಾಗೂ ಬಸವರಾಜ (36) ಬಂಧಿತರು. ಆರೋಪಿಗಳಿಂದ ₹ 15 ಸಾವಿರ ಮೌಲ್ಯದ ಮೂರೂವರೆ ಕೆ.ಜಿ ಶ್ರೀಗಂಧ ಹಾಗೂ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ.

ಫೆ.8ರಂದು ನಸುಕಿನಲ್ಲಿ ಆರೋಪಿಗಳು ಅನುಮಾನಸ್ಪದವಾಗಿ ಸಂಚರಿಸುತ್ತಿದ್ದ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮೂವರನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಶ್ರೀಗಂಧ ಪತ್ತೆಯಾಗಿದೆ. ವಿಚಾರಣೆ ನಡೆಸಿದಾಗ ಸಾಣೇಹಳ್ಳಿಯಲ್ಲಿ ನಡೆದ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

ಸಾಣೇಹಳ್ಳಿ ಮಠದಲ್ಲಿ ಡಿ.24ರಂದು ರಾತ್ರಿ ಶ್ರೀಗಂಧ ಕಳವು ಮಾಡಲಾಗಿತ್ತು. ಪ್ರಕರಣ ಪತ್ತೆಗೆ ಸಿಪಿಐ ಫೈಜುಲ್ಲಾ ಹಾಗೂ ಎಸ್‌ಐ ಶಿವಕುಮಾರ್‌ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.