ADVERTISEMENT

ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಚಾಲಕ ಸಾವು

​ಪ್ರಜಾವಾಣಿ ವಾರ್ತೆ
Published 2 ಮೇ 2022, 3:09 IST
Last Updated 2 ಮೇ 2022, 3:09 IST
ಗುಂಡಿಗೆ ಬಿದ್ದ ಟ್ರ್ಯಾಕ್ಟರ್
ಗುಂಡಿಗೆ ಬಿದ್ದ ಟ್ರ್ಯಾಕ್ಟರ್   

ಹೊಸದುರ್ಗ: ತಾಲ್ಲೂಕಿನ ಗುತ್ತಿಕಟ್ಟೆ ಲಂಬಾಣಿಹಟ್ಟಿ ಗೇಟ್ ಹಾಗೂ ಮಧುರೆಗೆ ಗ್ರಾಮದ ಮಧ್ಯೆ ಭಾನುವಾರ ಚಾಲಕನ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್ ಗುಂಡಿಗೆ ಬಿದ್ದು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೊಳಲ್ಕೆರೆ ತಾಲ್ಲೂಕಿನ ಎನ್.ಜಿ. ಹಳ್ಳಿ ಗ್ರಾಮದ ಶ್ರೀಶೈಲ (34) ಮೃತಪಟ್ಟ ಚಾಲಕ.

ಹೊಸ ಟ್ರ್ಯಾಕ್ಟರ್ ಅನ್ನು ವೇಗವಾಗಿ ಚಲಾಯಿಸಿದ ಪರಿಣಾಮ ಗುಂಡಿಗೆ ಬಿದ್ದಿದೆ. ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT