ಧರ್ಮಪುರ (ಚಿತ್ರದುರ್ಗ ಜಿಲ್ಲೆ): ಕುಡಿತಕ್ಕೆ ದಾಸನಾಗಿ ಕುಟುಂಬವನ್ನು ನಿರ್ಲಕ್ಷಿಸಿದ್ದ ಪತಿಯನ್ನು ಪತ್ನಿ ತನ್ನ ತವರು ಮನೆಯಲ್ಲಿ ಸರಪಳಿ ಬಿಗಿದು ಕಂಬಕ್ಕೆ ಕಟ್ಟಿ ಹಾಕಿದ್ದ ಘಟನೆ ಸಮೀಪದ ಹೊಸಹಳ್ಳಿಯಲ್ಲಿ ನಡೆದಿದೆ.
ಹಿರಿಯೂರು ತಾಲ್ಲೂಕಿನ ಹರ್ತಿಕೋಟೆ ಗ್ರಾಮದ ರಂಗನಾಥ್ ಹೊಸಹಳ್ಳಿಯ ಅಮೃತಾ ಅವರೊಡನೆ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಕುಡಿತದ ಚಟ ಅಂಟಿಸಿಕೊಂಡಿದ್ದ ರಂಗನಾಥ್ ಸಂಸಾರದ ಬಗ್ಗೆ ಗಮನ ನೀಡುತ್ತಿರಲಿಲ್ಲ. ಕುಡಿತದ ನಶೆಯಲ್ಲಿ ಸರಿಯಾಗಿ ಊಟವನ್ನೂ ಮಾಡುತ್ತಿರಲಿಲ್ಲ. ಇದರಿಂದ ರೋಸಿ ಹೋಗಿದ್ದ ಅಮೃತಾ ಗಂಡನನ್ನು ಮನೆಯಿಂದ ಹೊರಹೋಗದಂತೆ ತಡೆಯಲು ಕಾಲಿಗೆ ಸರಪಳಿ ಬಿಗಿದು, ಮನೆಯಲ್ಲಿನ ಕಂಬಕ್ಕೆ ಕಟ್ಟಿ ಬೀಗ ಜಡಿದು ಕೂಡಿ ಹಾಕಿದ್ದರು.
ಬುಧವಾರ ಹೊಸಹಳ್ಳಿಗೆ ತೆರಳಿದ್ದ ರಂಗನಾಥ್‌ನ ಪಾಲಕರಿಗೆ ಕೂಡಿ ಹಾಕಿರುವ ವಿಷಯ ತಿಳಿದಿದೆ. ಪಿಎಸ್ಐ ಪರಶುರಾಮ್ ಎನ್.ಲಮಾಣಿ ತನಿಖೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.