ADVERTISEMENT

ಆಳ್ವಾಸ್‌ಗೆ ಸಮಗ್ರ ಪ್ರಶಸ್ತಿ; ಉಜಿರೆ ದ್ವಿತೀಯ

ಮಂಗಳೂರು ವಿವಿ: ಅಂತರಕಾಲೇಜು ಸಾಂಸ್ಕೃತಿಕ ಉತ್ಸವ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2013, 6:31 IST
Last Updated 7 ಸೆಪ್ಟೆಂಬರ್ 2013, 6:31 IST

ಮುಡಿಪು: ಮಂಗಳಗಂಗೋತ್ರಿಯಲ್ಲಿ ಮೂರು ದಿನಗಳ ಕಾಲ ನಡೆದ ಅಂತರಕಾಲೇಜು ಮಟ್ಟದ ಸಾಂಸ್ಕೃತಿಕ ಉತ್ಸವ-2013ರಲ್ಲಿ ಮೂಡಬಿದಿರೆಯ ಆಳ್ವಾಸ್ ಕಾಲೇಜು ಅತ್ಯಧಿಕ ಅಂಕ ಪಡೆದು ಸಮಗ್ರ ಪ್ರಶಸ್ತಿಯನ್ನು ಬಾಚಿಕೊಂಡಿತು.

ಆಳ್ವಾಸ್ ಕಾಲೇಜು ತಂಡ ಒಟ್ಟು 34 ಅಂಕದೊಂದಿಗೆ ಚಾಂಪಿಯನ್‌ಶಿಪ್ ಪಡೆದರೆ, ಉಜಿರೆಯ ಎಸ್‌ಡಿಎಂ ಕಾಲೇಜು 22 ಅಂಕಗಳೊಂದಿಗೆ ದ್ವಿತೀಯ ಸ್ಥಾನವನ್ನು ಗಳಿಸಿತು. ಮಂಗಳೂರು ವಿಶ್ವವಿದ್ಯಾಲಯ ಕ್ಯಾಂಪಸ್ ತಂಡವು ತೃತೀಯ, ಮಂಗಳೂರಿನ ಕೆನರಾ ಕಾಲೇಜು ತಂಡ ನಾಲ್ಕನೇ ಸ್ಥಾನ ಗಳಿಸಿದವು.

ಜನಪದ ವಾದ್ಯ ಸಂಗೀತ ಸ್ಪರ್ಧೆಯಲ್ಲಿ ಆಳ್ವಾಸ್ ಕಾಲೇಜು ಪ್ರಥಮ, ಉಜಿರೆ ಎಸ್‌ಡಿಎಂ ದ್ವಿತೀಯ ಹಾಗೂ ಕೆನರಾ ಕಾಲೇಜು ತೃತೀಯ ಸ್ಥಾನವನ್ನು ಗಳಿಸಿದವು.  ರಂಗೋಲಿ ಸ್ಪರ್ಧೆಯಲ್ಲಿ ಸೇಂಟ್ ಅಲೋಶಿಯಸ್ ಕಾಲೇಜು ಪ್ರಥಮ, ಕೆನರಾ- ದ್ವಿತೀಯ, ಗೋವಿಂದಾಸ್ ಕಾಲೇಜು ತೃತೀಯ ಸ್ಥಾನ ಪಡೆದವು. ಕಾರ್ಟೂನಿಂಗ್ ಸ್ಪರ್ಧೆಯಲ್ಲಿ ಆಳ್ವಾಸ್ ಕಾಲೇಜು ಪ್ರಥಮ, ಕೆನರಾ- ದ್ವಿತೀಯ, ಕಲ್ಪತರು ಕಾಲೇಜು ತೃತೀಯ ಸ್ಥಾನ ಗೆದ್ದವು.

ಮಣ್ಣಿನ ಆಕೃತಿ ರಚನೆ ಸ್ಪರ್ಧೆಯಲ್ಲಿ ಉಜಿರೆ ಎಸ್‌ಡಿಎಂ ಪ್ರಥಮ, ಗೋವಿಂದಾಸ್- ದ್ವಿತೀಯ, ಮೋತಿಮಹಲ್ ಕಾಲೇಜು ತೃತೀಯ ಸ್ಥಾನವನ್ನು ಪಡೆಯಿತು. ಸ್ಥಳದಲ್ಲೇ ಫೊಟೋಗ್ರಫಿ ಸ್ಪರ್ಧೆಯಲ್ಲಿ ಉಡುಪಿಯ ಎಂಜಿಎಂ ಕಾಲೇಜು ಪ್ರಥಮ, ಆಳ್ವಾಸ್- ದ್ವಿತೀಯ, ಉಜಿರೆಯ ಎಸ್‌ಡಿಎಂ ತೃತೀಯ ಸ್ಥಾನವನ್ನು ಪಡೆದರೆ, ಕನ್ನಡ ಚರ್ಚಾ ಸ್ಪರ್ಧೆಯಲ್ಲಿ ಕೆನರಾ ಕಾಲೇಜು ಪ್ರಥಮ, ಎಸ್‌ಡಿಎಂ- ದ್ವಿತೀಯ, ಉಡುಪಿಯ ಪಿಪಿಸಿ ಕಾಲೇಜು ತೃತೀಯ ಸ್ಥಾನವನ್ನು ಗಳಿಸಿವೆ.

ಇಂಗ್ಲಿಷ್ ಚರ್ಚಾ ಸ್ಪರ್ಧೆಯಲ್ಲಿ ಪಿಪಿಸಿ ಸಂಧ್ಯಾ ಕಾಲೇಜು ಪ್ರಥಮ, ಉಡುಪಿ ಎಂಜಿಎಂ ದ್ವಿತೀಯ, ಮಂಗಳೂರಿನ ಮಹೇಶ್ ಕಾಲೇಜು ತೃತೀಯ ಸ್ಥಾನ ಗಳಿಸಿವೆ. ಶಾಸ್ತ್ರೀಯ ನೃತ್ಯ ಸ್ಪರ್ಧೆಯಲ್ಲಿ ಮಂಗಳೂರು ವಿ.ವಿ.ಕ್ಯಾಂಪಸ್ ತಂಡ ಪ್ರಥಮ, ಮಣಿಪಾಲ ಎಂಎಂಸಿ ದ್ವಿತೀಯ, ಆಳ್ವಾಸ್ ಕಾಲೇಜು ಮತ್ತು ಶ್ರಿನಿವಾಸ್ ಕಾಲೇಜು ಸಮಾನವಾಗಿ ತೃತೀಯ ಸ್ಥಾನ ಪಡೆದಿವೆ.

ಜಾನಪದ ನೃತ್ಯ ಸ್ಪರ್ಧೆಯಲ್ಲಿ ಆಳ್ವಾಸ್ ಪ್ರಥಮ, ಧವಳಾ ಮೂಡಬಿದಿರೆ ದ್ವಿತೀಯ ಸ್ಥಾನ ಗಳಿಸಿವೆ. ಕ್ವ್ಿ ಸ್ಪರ್ಧೆಯಲ್ಲಿ ಮಂಗಳೂರು ವಿ.ವಿ.ಕ್ಯಾಂಪಸ್ ತಂಡ ಪ್ರಥಮ, ತೃತೀಯ ಸ್ಥಾನವನ್ನು ಮಹೇಶ್ ಕಾಲೇಜು ತಂಡ ಗಳಿಸಿವೆ. ಶಾಸ್ತ್ರೀಯ ಸಂಗೀತ ಸ್ಪರ್ಧೆಯಲ್ಲಿ ಮಂಗಳೂರು ವಿ.ವಿ.ಕ್ಯಾಂಪಸ್ ತಂಡ ಪ್ರಥಮ, ಪಿಪಿಸಿ  ದ್ವಿತೀಯ, ಆಳ್ವಾಸ್ ತೃತೀಯ ಸ್ಥಾನವನ್ನು ಪಡೆದವು.

ಮೂಕಾಭಿನಯ ಸ್ಪರ್ಧೆಯಲ್ಲಿ ಎಸ್‌ಡಿಎಂ ಕಾಲೇಜು ಪ್ರಥಮ, ಆಳ್ವಾಸ್ ದ್ವಿತೀಯ ಮತ್ತು ಮೂಡಬಿದಿರೆಯ ಧವಳಾ ತೃತೀಯ ಸ್ಥಾನವನ್ನು ಪಡೆದಿವೆ. ರಂಗನಾಟಕ ಸ್ಪರ್ಧೆಯಲ್ಲಿ ಆಳ್ವಾಸ್ ಪ್ರಥಮ, ಕೆನರಾ ದ್ವಿತೀಯ, ಮಂಗಳೂರಿನ ರೊಸಾರಿಯೊ ತೃತೀಯ ಸ್ಥಾನವನ್ನು ಗಳಿಸಿದವು. ನಿವೃತ್ತ ಏರ್‌ಮಾರ್ಷಲ್ ಕೆ.ಸಿ.ಕಾರ್ಯಪ್ಪ ಹಾಗೂ  ಕುಲಪತಿ ಪ್ರೊ.ಟಿ.ಸಿ.ಶಿವಶಂಕರಮೂರ್ತಿ ಪ್ರಶಸ್ತಿ ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.