ADVERTISEMENT

ಎಲ್‌ಪಿಜಿ ಮೋಟಾರ್‌ ಬೈಕ್‌; ಕಿ.ಮೀ. 40 ಪೈಸೆ!

​ಪ್ರಜಾವಾಣಿ ವಾರ್ತೆ
Published 1 ಮೇ 2011, 10:20 IST
Last Updated 1 ಮೇ 2011, 10:20 IST
ಎಲ್‌ಪಿಜಿ ಮೋಟಾರ್‌ ಬೈಕ್‌; ಕಿ.ಮೀ. 40 ಪೈಸೆ!
ಎಲ್‌ಪಿಜಿ ಮೋಟಾರ್‌ ಬೈಕ್‌; ಕಿ.ಮೀ. 40 ಪೈಸೆ!   

ಮೂಡುಬಿದಿರೆ: ಪೆಟ್ರೋಲ್‌ ಬಲು ದುಬಾರಿ. ಮೋಟಾರ್‌ ಬೈಕ್‌ ಓಡಿಸುವುದು ಹೇಗೆ? ಎಂಬ ಚಿಂತೆ ಮಾಡುವವರಿಗೆ ಇಲ್ಲೊಂದು ಸಮಾಧಾನದ ಸುದ್ದಿ!

ಪಟ್ಟಣದ ಎಸ್‌ಎನ್‌ಎಂ ಪಾಲಿಟೆಕ್ನಿಕ್‌ ವಿದ್ಯಾರ್ಥಿಗಳು ಅಡುಗೆ ಅನಿಲದಿಂದಲೇ(ಎಲ್‌ಪಿಜಿ) ನಿರಾಯಾಸವಾಗಿ ಚಲಿಸಬಲ್ಲ ಮೋಟಾರ್‌ ಬೈಕ್‌ ಸಿದ್ಧಪಡಿಸಿದ್ದಾರೆ. 17 ವಿದ್ಯಾರ್ಥಿಗಳ ತಂಡ ಈ ಸಾಧನೆ ಮಾಡಿದೆ.

ಹೊರನೋಟಕ್ಕೆ ಸಾಮಾನ್ಯ ಮೋಟಾರ್‌ ಬೈಕ್‌ನಂತೆಯೇ ಕಾಣುವ ಪೆಟ್ರೋಲ್‌ ಟ್ಯಾಂಕ್‌ನಲ್ಲಿ ಸಣ್ಣ ಬದಲಾವಣೆ ಮಾಡಿರುವ ವಿದ್ಯಾರ್ಥಿಗಳು, ಯಾವುದೇ ಪೆಟ್ರೋಲ್‌ ಬಂಕ್‌ನಲ್ಲಿ ಸುಲಭವಾಗಿ ಅನಿಲ ತುಂಬಿಸಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಿದ್ದಾರೆ.

ಎರಡೂವರೆ ಕೆಜಿಗೂ ಹೆಚ್ಚಿನ ಸಾಮರ್ಥ್ಯವುಳ್ಳ ಅನಿಲ ಟ್ಯಾಂಕ್‌ ಬೈಕ್‌ನಲ್ಲಿ ಅಳವಡಿಸಬಹುದು. ಮೈಲೇಜ್‌ ಸಹ ಬಹಳ ಉತ್ತಮವಾಗಿದೆ. 1 ಕಿ.ಮೀ. ಪ್ರಯಾಣಕ್ಕೆ 30ರಿಂದ 40 ಪೈಸೆ ವೆಚ್ಚವಾಗುತ್ತದೆ. ಒಮ್ಮೆ ಟ್ಯಾಂಕ್‌ ಭರ್ತಿ ಮಾಡಿದರೆ 350 ಕಿ.ಮೀ.ವರೆಗೂ ಪ್ರಯಾಣಿಸಬಹುದು.

ಅನಿಲ ಖಾಲಿಯಾದರೆ ಪೆಟ್ರೋಲ್‌ನಿಂದಲೂ ಬೈಕ್‌ ಚಲಿಸುವಂತೆ ಎರಡೂ ಬಗೆ ಇಂಧನ ಬಳಕೆ ವ್ಯವಸ್ಥೆ ಮಾಡಲಾಗಿದೆ. ಆಧುನಿಕ ವಿನ್ಯಾಸಕ್ಕೆ ರೂ. 10ಸಾವಿರದಿಂದ 12 ಸಾವಿರ ಮಾತ್ರ ವೆಚ್ಚವಾಗುತ್ತದೆ ಎಂದು ವಿದ್ಯಾರ್ಥಿ ತಂಡದ ನಾಯಕ ಪ್ರಣವ್‌ ಕುಮಾರ್‌ ಮತ್ತು ಉಪನ್ಯಾಸಕ ಸುರೇಂದ್ರ ಕಾವ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.