ADVERTISEMENT

ಎಸ್‌ಇಜೆಡ್‌ ನಿರ್ವಸಿತರ ಕಾಲೊನಿ ಗುಡ್ಡದಲ್ಲಿ ಬೆಂಕಿ

ಸುದ್ದಿ 2 ನಿಮಿಷ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2015, 5:43 IST
Last Updated 16 ಏಪ್ರಿಲ್ 2015, 5:43 IST

ಬಜ್ಪೆ: ಎಸ್‍ಇಜೆಡ್‌ ನಿರ್ವಸಿತರ ಕಾಲೊನಿಯ ಸಮೀಪದ ಗುಡ್ಡಕ್ಕೆ ಬೆಂಕಿ ಬಿದ್ದು ಮರಗಿಡ ಭಸ್ಮಗೊಂಡಿರುವ ಘಟನೆ ಮಂಗಳವಾರ ಮಧ್ಯಾಹ್ನ ಬಜ್ಪೆ ಶಾಂತಿನಗರ ಎಂಬಲ್ಲಿ ಸಂಭವಿಸಿದೆ. ಬೆಂಕಿ ಆಕಸ್ಮಿಕಕ್ಕೆ ಎಂಎಸ್‍ಇಜೆಡ್‌ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ದೂರಿದ್ದಾರೆ.

ಮಧ್ಯಾಹ್ನ ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿ ಕ್ಷಣಾರ್ಧದಲ್ಲಿ  ಗುಡ್ಡ ಪೂರ್ತಿ ಆವರಿಸಿಕೊಂಡಿದೆ. ಈ ಬಗ್ಗೆ ಸಂಸ್ಥೆಯ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರೂ ಸ್ಥಳಕ್ಕೆ ಬಾರದೆ ನಿರ್ಲಕ್ಷ್ಯ ತೋರಿಸ ಲಾಗಿದೆ. ಎಂಎಸ್‍ಇಜೆಡ್‌ಗೆ ಜಾಗ ನೀಡಿದ ನಿರ್ವಸಿತರಿಗೆ ಪುನರ್ವಸತಿ ಕಲ್ಪಿಸಿದ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದೆ. ಘಟನೆಯಿಂದ ಯಾವುದೇ ಆಸ್ತಿ ಪಾಸ್ತಿ ನಷ್ಟ ಉಂಟಾಗಿಲ್ಲವಾದರೂ  ಕಂಪೆನಿ ಪುನರ್ವಸತಿ ಪ್ರದೇಶದಲ್ಲಿ ಸೂಕ್ತ ವ್ಯವಸ್ಥೆ ಭದ್ರತೆ ಕಲ್ಪಿಸಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.