ADVERTISEMENT

ಜನವರಿಯಲ್ಲಿ ನದಿ ಹಬ್ಬಕ್ಕೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2018, 8:42 IST
Last Updated 11 ಡಿಸೆಂಬರ್ 2018, 8:42 IST

ಮಂಗಳೂರು: ಹಿನ್ನೀರು ಮತ್ತು ನದಿಗಳನ್ನು ಬಳಕೆ ಮಾಡಿಕೊಂಡು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ 2019ರ ಜನವರಿಯಲ್ಲಿ ನದಿ ಹಬ್ಬ ಆಯೋಜಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್‌ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ‘ನೇತ್ರಾವತಿ, ಫಲ್ಗುಣಿ ಮತ್ತು ಶಾಂಭವಿ ನದಿಗಳು ಸಮುದ್ರ ಸೇರುವ ಸ್ಥಳಗಳಲ್ಲಿ ನದಿ ಹಬ್ಬ ಆಯೋಜಿಸಲಾಗುವುದು. ಜಿಲ್ಲಾಡಳಿತವು ₹ 30 ಲಕ್ಷ ಅನುದಾನ ಕೋರಿದ್ದು, ರಾಜ್ಯ ಸರ್ಕಾರ ತಾತ್ವಿಕ ಅನುಮೋದನೆ ನೀಡಿದೆ’ ಎಂದರು.

ನದಿ ಹಬ್ಬದ ಭಾಗವಾಗಿ ಕಯಾಕಿಂಗ್‌, ರೋಯಿಂಗ್‌, ಫೆರ್ರಿ ವಿಹಾರ ಮತ್ತು ಆಹಾರ ಉತ್ಸವಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಇನ್ನೂ ಕೆಲವು ಚಟುವಟಿಕೆಗಳ ಕುರಿತು ಪ್ರವಾಸೋದ್ಯಮ ಇಲಾಖೆ ಪರಿಶೀಲನೆ ನಡೆಸುತ್ತಿದೆ ಎಂದು ಹೇಳಿದರು.

ADVERTISEMENT

ನದಿ ತೀರದ ಬಳಕೆ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಕೂಳೂರು ಸೇತುವೆಯಿಂದ ಸುಲ್ತಾನ್‌ ಬತ್ತೇರಿ ಮಾರ್ಗವಾಗಿ ಹಳೆಯ ಬಂದರಿನವರೆಗೆ 12 ತೇಲುವ ಜೆಟ್ಟಿಗಳನ್ನು ನಿರ್ಮಿಸುವ ಪ್ರಸ್ತಾವವಿದೆ. ಈ ಕುರಿತು ಯೋಜನಾ ವರದಿ ಸಿದ್ಧಪಡಿಸಲಾಗುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.