ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಪುತ್ತೂರು ರಸ್ತೆಯಲ್ಲಿ ಬಳ್ಪ ಸಮೀಪದ ಎಡೋಣಿ ಎಂಬಲ್ಲಿ ಮುಖ್ಯ ರಸ್ತೆಯಲ್ಲೇ ವಿದ್ಯುತ್ ಕಂಬವೊಂದು ಇದ್ದು ಅಪಾಯಕ್ಕೆ ಆಹ್ವಾನ ನೀಡುವಂತೆ ಕಾಣುತ್ತಿದೆ.
ಪ್ರಧಾನ ರಸ್ತೆಯಲ್ಲಿ ಈ ಕಂಬವಿದೆ. ತಿಂಗಳ ಹಿಂದೆ ರಸ್ತೆ ವಿಸ್ತರಣೆಗೊಂಡು ಡಾಂಬರೀಕರಣಗೊಂಡಿತ್ತು. ಈ ಮಧ್ಯೆ ವಿದ್ಯುತ್ ಕಂಬ ಬದಲಾಯಿಸದೆ ಇರುವುದರಿಂದ ಅನಾಹುತಕ್ಕೆ ಆಹ್ವಾನ ನೀಡುವಂತಾಗಿದೆ. ರಸ್ತೆ ನೂತನವಾಗಿ ನಿರ್ಮಾಣಗೊಂಡದ್ದರಿಂದ ವಾಹನಗಳ ಸಂಚಾರವೂ ಹೆಚ್ಚಾಗಿದೆ.
ರಸ್ತೆಯಲ್ಲಿ ದಿನನಿತ್ಯ ನೂರಾರು ವಾಹನಗಳು ಓಡಾಡುತ್ತಿದ್ದು, ಈ ಕಂಬ ಇರುವ ಭಾಗದಲ್ಲಿ ಏನಾದರೂ ಒಂದು ವಾಹನಕ್ಕೆ ಇನ್ನೊಂದು ವಾಹನ ಸೈಡ್ ಕೊಡುವ ವೇಳೆ ಈ ಕಂಬದಿಂದ ಅಪಾಯ ಉಂಟಾಗುವ ಸನ್ನಿವೇಶವೇ ಜಾಸ್ತಿ.
ಈ ಬಗ್ಗೆ ಹಲವಾರು ಬಾರಿ ಸ್ಥಳೀಯರು ಸಂಬಂಧಿಸಿದ ಮೆಸ್ಕಾಂಗೆ ಸೂಚಿಸಿದರೂ ಅದು ಈ ಬಗ್ಗೆ ಗಮನಹರಿಸಿಲ್ಲ. ಅಪಾಯ ನಡೆಯುವುದಕ್ಕೆ ಮುನ್ನ ಇಲಾಖೆ ಎಚ್ಚೆತ್ತುಕೊಳ್ಳಬೇಕು ಎಂದು ಸ್ಥಳೀಯರ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.