ADVERTISEMENT

ಬಿಜೆಪಿ ಸರ್ಕಾರ ಖಚಿತ: ಶೋಭಾ ಕರಂದ್ಲಾಜೆ

ಸುಳ್ಯದಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ವಿಶ್ವಾಸದ ನುಡಿ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2018, 10:34 IST
Last Updated 21 ಏಪ್ರಿಲ್ 2018, 10:34 IST

ಸುಳ್ಯ: ‘ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಅಧಿಕಾರ ಹಿಡಿದ ಅತ್ಯಂತ ಕೆಟ್ಟ ಸರ್ಕಾರ. ಇದನ್ನು ಕಿತ್ತು ಹಾಕಲು ಜನರು ಸಜ್ಜಾಗಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಆಡಳಿತ ಖಚಿತ’ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಸುಳ್ಯದ ಬಿಜೆಪಿ ಅಭ್ಯರ್ಥಿ ಅಂಗಾರ ಅವರ ನಾಮಪತ್ರ ಸಲ್ಲಿಕೆಗೆ ಮುನ್ನ ಶುಕ್ರವಾರ ನಡೆದ ಬಿಜೆಪಿ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಧರ್ಮ-ಅಧರ್ಮದ ಮಧ್ಯೆ ನಡೆಯುವ ಚುನಾವಣೆ ಇದು. ಜಿಲ್ಲೆಯಲ್ಲಿಯೂ ಈ ಸರ್ಕಾರದ ಪೈಚಾಚಿಕ ಕೃತ್ಯಕ್ಕೆ ಅನೇಕ ಹಿಂದೂ ಕಾರ್ಯಕರ್ತರು ಬಲಿಯಾಗಿದ್ದಾರೆ. ಇದಕ್ಕೆಲ್ಲಾ ಇತಿಶ್ರೀ ಹಾಡಲು ಈ ಚುನಾವಣೆ ಮಹತ್ವದ್ದು’ ಎಂದು ಶೋಭಾ ಹೇಳಿದರು.

ADVERTISEMENT

ಮುಖಂಡ ಹರಿಕೃಷ್ಣ ಬಂಟ್ವಾಳ್ ಮಾತನಾಡಿ ‘ಸಿದ್ದರಾಮಯ್ಯ, ರಮಾನಾಥ ರೈ ಅವರು ಈ ದೇಶಕ್ಕೆ ಸಮಸ್ಯೆ. ಅವರನ್ನು ಈ ಬಾರಿ ಜನರು ಮನೆಗೆ ಕಳುಹಿಸುತ್ತಾರೆ’ ಎಂದರು.

ಶಾಸಕ ಅಂಗಾರ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ವಾಗ್ಮಿ ಆದರ್ಶ ಗೋಖಲೆ ಮಾತನಾಡಿದರು. ವೇದಿಕೆಯಲ್ಲಿ ಕೇರಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುರೇಂದ್ರನ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬ್ರಿಜೇಶ್ ಚೌಟ, ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಚುನಾವಣಾ ಉಸ್ತುವಾರಿ ಎ.ವಿ.ತೀರ್ಥರಾಮ  ಇದ್ದರು.

ಸ್ಪರ್ಧೆ ಇಲ್ಲ: ಶೋಭಾ

‘ನಾನು ಈ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಪುತ್ತೂರು ಕ್ಷೇತ್ರದ ಅಭ್ಯರ್ಥಿ ಬದಲಾವಣೆ ಇಲ್ಲ' ಎಂದು ಸಂಸದೆ ಶೋಭಾ ಕರಂದ್ಲಾಜೆ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.