ADVERTISEMENT

ಬ್ರಿಟಿಷರ ಕಾಲದಲ್ಲೂ ರೈತರ ಆತ್ಮ ಹತ್ಯೆ ಇತ್ತು

ಕೃಷಿ: ಹೊಸತನದ ಹುಡುಕಾಟ– ಕೃಷಿಕ ವರ್ತೂರು ನಾರಾಯಣ ರೆಡ್ಡಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2015, 6:39 IST
Last Updated 30 ನವೆಂಬರ್ 2015, 6:39 IST

ಮೂಡುಬಿದಿರೆ: ರೈತರ ಆತ್ಮಹತ್ಯಾ ಸರಣಿ ಇಂದು ನಿನ್ನೆಯದಲ್ಲ. ಬ್ರಿಟಿಷ್ ಪ್ರಭಾವದಿಂದ ಹೊಗೆಸೊಪ್ಪು, ಅರಳೆ ಬೆಳೆದ ರೈತರು ಅದರಲ್ಲಿ ಯಶ ಕಾಣದೆ ಕೈಸುಟ್ಟುಕೊಂಡಿದ್ದರು. ಅಂದು ಶುರು ವಾದ ಆತ್ಮಹತ್ಯಾ ಸರಣಿ ಇಂದಿಗೂ ಮುಂದುವರೆದಿದೆ. ರಾಜಕಾರಣಿಗಳು ಪರಿಹಾರ ಧನವನ್ನು ನೀಡಿದರೂ ಅದು ಕೇವಲ ಅವರ ಷಡ್ಯಂತ್ರ ಎಂದು ಪ್ರಗತಿಪರ ಕೃಷಿಕ ವರ್ತೂರು ನಾರಾ ಯಣ ರೆಡ್ಡಿ ಆರೋಪಿಸಿದರು.

‘ರತ್ನಾಕರವರ್ಣಿ ವೇದಿಕೆಯಲ್ಲಿ ನಡೆದ ‘ಕೃಷಿ: ಹೊಸತನದ ಹುಡುಕಾಟ’ ವಿಷಯದ ಬಗ್ಗೆ ಭಾನುವಾರ ವಿಶೇಷ ಉಪನ್ಯಾಸ ನೀಡಿದರು. ‘ರೈತರನ್ನು ಅನಕ್ಷರಸ್ಥರೆನ್ನುತ್ತಾರೆ ಆದರೆ ಕೃಷಿಗೆ ಏನು ಬೇಕೆಂಬುದನ್ನು ವೈಜ್ಞಾನಿಕವಾಗಿ ತಿಳಿದು ಕೊಂಡಿರುವ ವ್ಯಕ್ತಿ ರೈತ ಮಾತ್ರ.

ನಮ್ಮ ಸರ್ಕಾರ ಎಷ್ಟೋ ಯೋಜನೆಗಳನ್ನು ಜಾರಿ ಮಾಡುತ್ತದೆ, ಪ್ರತಿ ವರ್ಷವೂ ನಮ್ಮ ರಾಜಕಾರಣಿಗಳು ವಿದೇಶಗಳಿಗೆ ಕೃಷಿ ಪದ್ಧತಿಯನ್ನು ಅಧ್ಯಯನ ಮಾಡುವುದಕ್ಕಾಗಿ ಹೋಗುತ್ತಾರೆ, ನಮ್ಮಲ್ಲಿ ಕೃಷಿ ವಿಜ್ಞಾನಿಗಳಿದ್ದಾರೆ. ಆದರೆ ಅದು ಎಷ್ಟು ಯಶಸ್ಸು ಕಂಡಿದೆ ಎಂಬುದು ಅತಿ ಮುಖ್ಯವಾಗಿ ಗಮನಿಸ ಬೇಕಾದ ಅಂಶ’ ಎಂದರು.

ಇಂದು ಮನುಷ್ಯ ಧನದಾಹಿಗಳಾಗಿ ದ್ದಾನೆ. ಹಣವೇ ಮನುಷ್ಯನನ್ನು ಹಾಳು ಮಾಡುತ್ತದೆ. ಇಂದು ರೈತರಿಗೆ ಸಹಕರಿಸ ಬೇಕಾದ ಕೃಷಿ ವಿವಿಗಳೂ ಅವರಿಗೆ ಅನುದಾನ ನೀಡುವ ರಾಜಕೀಯ ಶಕ್ತಿಗಳ ಹಿಂದೆ ಹೋಗುತ್ತಿವೆ ಎಂದರು. ಇವತ್ತು ರಾಸಾಯನಿಕ ಗೊಬ್ಬರಗಳ ಬಳಕೆ ಹೆಚ್ಚಾಗಿ ಕೃಷಿಭೂಮಿ ಸಂಪೂರ್ಣ ವಾಗಿ ಹಾಳಾಗಿದೆ.

ಕೃಷಿ ಭೂಮಿಗೆ ಹಾಕಿದ ರಾಸಾಯನಿಕಗಳಲ್ಲಿ ಶೇ 16ರಷ್ಟು ಮಾತ್ರ ಕೃಷಿಗೆ ಸಹಕಾರಿ, ಉಳಿದದ್ದು ವಿಷಕಾರಿ ಅಂಶಗಳಾಗಿ ಮಾರ್ಪಾಡಾಗುತ್ತದೆ. ಭೂಮಿಗೆ ಅಗತ್ಯ ವಾಗಿ ಬೇಕಾದ ಸಾವಯವ ಇಂಗಾಲ ಈ ಅವೈಜ್ಞಾನಿಕ ಕೃಷಿ ಪದ್ಧತಿಯಿಂದ ಸುಟ್ಟುಹೋಗುತ್ತಿದೆ.

ಇದರಿಂದ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕಡಿಮೆ ಯಾಗುತ್ತದೆ. ಕೃಷಿಯಲ್ಲಿ ‘ತಿಪ್ಪೆಗುಂಡಿ’ ಚಿನ್ನದ ಗಣಿಯಿದ್ದಂತೆ. ಹಿಂದೆಲ್ಲ ಪೂಜೆಗೊಳಗಾಗುತ್ತಿದ್ದ ಇದು ಇಂದು ಕಸದ ತೊಟ್ಟಿಗಳಾಗಿ ಬಳಕೆಯಾಗುತ್ತಿದೆ. ಇದು ವಿಷಾದನೀಯ ಎಂದು ಅವರು ಹೇಳಿದರು. ಕೃಷಿಗೆ ತಿಪ್ಪೆಗುಂಡಿ, ಸೂಕ್ಷ್ಮಾಣು ಜೀವಿಗಳು ಅವಶ್ಯವಾಗಿ ಬೇಕು. ಆದರೆ ರಾಸಾಯನಿಕಗಳ ಬಳಕೆಯಿಂದಾಗಿ ಅವು ಮಣ್ಣಿನಿಂದ ಮರೆಯಾಗುತ್ತಿವೆ.

ನಮ್ಮ ದೇಶಕ್ಕೆ ಖಂಡಿತವಾಗಿ ರಾಸಾಯ ನಿಕ ಗೊಬ್ಬರಗಳು ಬೇಕಾಗಿಲ್ಲ. ನಮ್ಮಲ್ಲಿ ರುವ ಸಾವಯವ ಕೃಷಿ ಪದ್ಧತಿಯೇ ನಮಗೆ ಸೂಕ್ತ ಎಂದು ವಿವರಿಸಿದರು ಹಸುಗಳ ಮಾಂಸವನ್ನು ವಿದೇಶ ಗಳಿಗೆ ರಫ್ತು ಮಾಡುವ ನೀತಿಯೊಂದು ಈಗ ಜಾರಿಗೆ ಬಂದಿದೆ. ಆದರೆ ಸತ್ತ ಹಸುವನ್ನು ಮಣ್ಣಲ್ಲಿ ಹೂತು ಹಾಕಿದರೆ ಅದಕ್ಕಿಂತ ಉತ್ತಮವಾದ ಸಾವಯವ ಗೊಬ್ಬರ ಬೇರೊಂದಿಲ್ಲ. ಕೃಷಿಗೆ ಅತ್ಯವಶ್ಯವಾದ ರಂಜಕ ಇದರಿಂದ ದೊರೆಯುತ್ತದೆ. ಇದು ಕೃಷಿಗೆ ಅತ್ಯಂತ ಸಹಕಾರಿ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.