ADVERTISEMENT

`ಮಕ್ಕಳಿಗೆ ಅನುಕಂಪಕ್ಕಿಂತ ಅವಕಾಶ ಮುಖ್ಯ'

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2013, 9:26 IST
Last Updated 5 ಏಪ್ರಿಲ್ 2013, 9:26 IST

ಪುತ್ತೂರು: `ಸವಾಲಿನ ಮಕ್ಕಳಿಗೆ ಅನುಕಂಪಕ್ಕಿಂತ ಅವಕಾಶ ನೀಡುವುದು ಮುಖ್ಯ. ಅವಕಾಶ ನೀಡಿದಾಗ ಪ್ರತಿ ಮಕ್ಕಳು ಕೂಡಾ ಒಂದಲ್ಲ ಒಂದು ರೀತಿಯ ಸಾಧಕರಾಗಿಯೇ ಬಿಡುತ್ತಾರೆ' ಎಂದು ಜಿಲ್ಲಾ ಶಿಕ್ಷಕ ಶಿಕ್ಷಣ ಕೇಂದ್ರದ ಪ್ರಾಂಶುಪಾಲರಾದ ಫಿಲೋಮಿನಾ ಲೋಬೊ ಹೇಳಿದರು.

ಸರ್ವಶಿಕ್ಷಣ ಅಭಿಯಾನ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ, ವಿವೇಕಾನಂದ ವಿದ್ಯಾ ಸಂಸ್ಥೆ ತೆಂಕಿಲ ಸಹಯೋಗದಲ್ಲಿ ಗುರುವಾರ ನಡೆದ ಪುತ್ತೂರು ತಾಲ್ಲೂಕು ಮಟ್ಟದ ವಿಶೇಷ ಅಗತ್ಯವುಳ್ಳ ಮಕ್ಕಳ ಮೇಳ `ಬೆರೆಯೋಣ ಬಾ' ಕಾರ್ಯಕ್ರಮದ ಉದ್ಘಾಟಿಸಿ ಅವರು ಮಾತನಾಡಿದರು.

ಲಿಮ್ಕೋ ದಾಖಲೆ ನಿರ್ಮಿಸಿದ ಭಿನ್ನ ಸಾಮರ್ಥ್ಯದ ಯುವಕ ಸುರೇಶ್ ನಾಯಕ್ ಕಾರ್ಯಕ್ರಮವನ್ನು ಬಣ್ಣದ ಚಿತ್ತಾರವನ್ನು ಬಿಡಿಸುವುದರ ಮೂಲಕ ಉದ್ಘಾಟಿಸಿದರು.

ದ.ಕ.ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ಮೋಸೆಸ್ ಜಯಶೇಖರ್ ಮಾತನಾಡಿ, ಶಿಕ್ಷಣ ಇಲಾಖೆಯು ವಿಶೇಷ ಅಗತ್ಯವುಳ್ಳ ಮಕ್ಕಳಿಗಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಪೋಷಕರು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.

ಡಯಟ್ ಉಪಪ್ರಾಂಶುಪಾಲ ವಾಲ್ಟರ್ ಡಿಮೆಲ್ಲೊ, ಇಲಾಖೆಯು ಪ್ರತಿ ಶಾಲೆಯಲ್ಲೂ ಭಿನ್ನ ಸಾಮರ್ಥ್ಯದ ಮಕ್ಕಳಿಗಾಗಿ ವಿಶೇಷ ಶಿಕ್ಷಕರನ್ನು ನೇಮಿಸಿದೆ ಹಾಗೂ ಶಿಕ್ಷಕರಿಗಾಗಿ ಸಮನ್ವಯ ಶಿಕ್ಷಣ ತರಬೇತಿಯನ್ನು ನೀಡುತ್ತಿದೆ ಎಂದರು.

ಶಿವಪ್ರಕಾಶ್.ಎನ್, ಗೀತಾ ಡಿ.ಶೆಟ್ಟಿ, ರವೀಂದ್ರ ರೈ, ಜಿನ್ನಪ್ಪ ಗೌಡ, ಮಾಮಚ್ಚನ್, ಡಾ.ಸಂಜಯ್ ಮತ್ತಿತರರು ಉಪಸ್ಥಿತರಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿಶೇಷ ಅಗತ್ಯವುಳ್ಳ ಮಕ್ಕಳನ್ನು ಸನ್ಮಾನಿಸಲಾಯಿತು. ವಿಶೇಷ ಅಗತ್ಯವುಳ್ಳ ಮಕ್ಕಳಿಗಾಗಿ ಸಹಕರಿಸಿದ ಸಂಘ ಸಂಸ್ಥೆಗಳನ್ನು ಅಭಿನಂದಿಸಲಾಯಿತು.

ಪೋಷಕರಿಗಾಗಿ ಡಾ. ಸುಲೇಖಾ ವರದರಾಜ್ ಚಂದ್ರಗಿರಿ ಮಕ್ಕಳ ಪೋಷಣೆಯ ಬಗ್ಗೆ ಮಾಹಿತಿ ನೀಡಿದರು.ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ  ನಂದೀಶ್ ಬಿ.ವಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಿ.ಆರ್.ಪಿ ತಾರಾನಾಥ ಸವಣೂರು ವಂದಿಸಿದರು.ಬಿ.ಆರ್.ಪಿ ವಿಜಯ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.

ಮಕ್ಕಳು ಆಹಾರ ಮಳಿಗೆ, ಹಣ್ಣಿನ ಅಂಗಡಿ, ಬೇತಾಳ ಕುಣಿತ, ಬಣ್ಣದ ಪಯಣ, ಅಗ್ನಿಶಾಮಕ ಪ್ರದರ್ಶನ, ವೈದ್ಯಕೀಯ ತಪಾಸಣೆ, ಪಾನೀಯ ಮಳಿಗೆ, ಮನೋರಂಜನಾ ಆಟ, ಜಾದೂ ಪ್ರದರ್ಶನ, ವೀಡಿಯೊ ಪ್ರದರ್ಶನ, ಕಸದಿಂದ ರಸ, ವಿಜ್ಞಾನ ಪ್ರದರ್ಶನ ಮುಂತಾದ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡರು.

ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಹರಿಕಿರಣ್ ಕೆ, ವಿಜಯ್ ಕುಮಾರ್, ಕೊರಗಪ್ಪ ನಾಯ್ಕ, ಕೆ.ಕೆ ಮಾಸ್ತರ್, ರಮೇಶ್ ಉಳಯ, ಶಿಕ್ಷಣ ಸಂಯೋಜಕರಾದ ನವೀನ್ ಸ್ಟೀಫನ್ ವೇಗಸ್, ಹುಕ್ರ, ಮಾಧವ, ಸಿ.ಆರ್.ಪಿಗಳಾದ ಹರಿಪ್ರಸಾದ್.ಕೆ, ತುಕಾರಾಮ ಗೌಡ, ಬಾಬು.ಎಂ, ವಿಶ್ವೇಶ್ವರ ಭಟ್, ಗೋದಾವರಿ.ಪಿ, ರಾಮಣ್ಣ ರೈ, ತಾರಾನಾಥ.ಪಿ, ತನುಜಾ.ಎಂ, ದೇವಿಪ್ರಸಾದ್ ಕೆ.ಸಿ, ಪುಷ್ಪಾ.ಕೆ, ಲಕ್ಷ್ಮೀನಾರಾಯಣ ರಾವ್, ಮುತ್ತಪ್ಪ ಪೂಜಾರಿ, ಶೀನಪ್ಪ ನಾಯ್ಕ, ಸುಂದರ ಗೌಡ, ಅನ್ನಪೂರ್ಣ, ಜಯಪ್ರಕಾಶ್ ಜಿ.ಪಿ, ಐ.ಇ.ಆರ್.ಟಿಗಳಾದ ಶಶಿಕಲಾ.ಬಿ, ಸಾವಿತ್ರಿ.ಕೆ, ಗಣೇಶ್.ಪಿ, ವಿಶೇಷ ಶಿಕ್ಷಕಿ ಶಶಿಕಲಾ.ಪಿ ವಿವಿಧ ಮೇಳಗಳನ್ನು ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.