ADVERTISEMENT

ಮೂಲ್ಕಿ:ಜಲ ಸಾಹಸ ಶಿಬಿರಕ್ಕೆ ತೆರೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2016, 11:31 IST
Last Updated 31 ಜನವರಿ 2016, 11:31 IST
ಮೂಲ್ಕಿ ಕೊಳಚಿಕಂಬಳದ ಮಂತ್ರ ಸರ್ಫ್‌್ ಕ್ಲಬ್‌ನಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆದ ರೋವರ್ಸ್ ಮತ್ತು ರೇಂಜರ್ಸ್ ರಾಷ್ಟ್ರ ಮಟ್ಟದ ಜಲಸಾಹಸ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಸನ್ಮಾನ ಪತ್ರ ವಿತರಿಸಲಾಯಿತು.
ಮೂಲ್ಕಿ ಕೊಳಚಿಕಂಬಳದ ಮಂತ್ರ ಸರ್ಫ್‌್ ಕ್ಲಬ್‌ನಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆದ ರೋವರ್ಸ್ ಮತ್ತು ರೇಂಜರ್ಸ್ ರಾಷ್ಟ್ರ ಮಟ್ಟದ ಜಲಸಾಹಸ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಸನ್ಮಾನ ಪತ್ರ ವಿತರಿಸಲಾಯಿತು.   

ಮೂಲ್ಕಿ: ಇಲ್ಲಿನ ಕೊಳಚಿಕಂಬಳದ ಮಂತ್ರ ಸರ್ಫ್‌್ ಕ್ಲಬ್‌ನಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆದ ರೋವರ್ಸ್ ಮತ್ತು ರೇಂಜರ್ಸ್ ರಾಷ್ಟ್ರಮಟ್ಟದ ಜಲಸಾಹಸ ಶಿಬಿರದ ಸಮಾರೋಪ ಸಮಾರಂಭ ಶನಿವಾರ ಸಂಜೆ ನಡೆಯಿತು.

ಸಮಾರೋಪ ಭಾಷಣ ಮಾಡಿದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಎನ್.ಜಿ. ಮೋಹನ್,  ‘ನಾವು ಪ್ರಾಮಾಣಿಕರಾದರೆ ಸಮಾಜ ಹಾಗೂ ರಾಷ್ಟ್ರ ಪ್ರಾಮಾಣಿಕವಾಗಿರು ತ್ತದೆ’ ಎಂದರು.

ಅನಿಸಿಕೆ ವ್ಯಕ್ತ ಪಡಿಸಿದ ಮಧ್ಯ ಪ್ರದೇಶದ ವಿದ್ಯಾರ್ಥಿ ಹುತೇಶ್ ಸಿಂಗ್, ‘ಜಲಸಾಹಸ ಶಿಬಿರದಿಂದ ಜೀವನದ ಅತ್ಯಮೂಲ್ಯ ಸಾಹಸವೊಂದನ್ನು ಕಲಿತೆ. ಮುಂದೆ ಜೀವನದಲ್ಲಿ ಪ್ರಯೋಜನವಾಗಲಿದೆ’ ಎಂದರು.

ಕ.ಸಾ.ಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದ.ಕ ಜಿಲ್ಲಾ ಸಂಸ್ಥೆ ಹಾಗೂ ಸ್ಥಳೀಯ ಸಂಸ್ಥೆ, ಮಂತ್ರ ಸರ್ಫ್‌ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ನಡೆದ ಶಿಬಿರದಲ್ಲಿ 9 ರಾಜ್ಯಗಳ 130ಕ್ಕೂ ಅಧಿಕ ಶಿಬಿರಾರ್ಥಿಗಳು ಭಾಗವಹಿಸಿದ್ದರು.

ಕಾರ್ನಾಡು ಹರಿಹರ ಕ್ಷೇತ್ರ ಆಡಳಿತ ಮೊಕ್ತೇಸರ ಎಂ.ಎಚ್ ಅರವಿಂದ ಪೂಂಜ, ಮುಂಬೈ ಬಂಟ್ಸ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಮಾನಂಪಾಡಿ ಮೇಗಿನ ಗುತ್ತು ಜಯ ಶೆಟ್ಟಿ, ಕಿನ್ನಿಗೋಳಿ ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ, ಸ್ವಾಗತ ಸಮಿತಿ ಕಾರ್ಯದರ್ಶಿ ವಿಜಯ ಕುಮಾರ್ ಕುಬೆವೂರು, ಸ್ಕೌಟ್ಸ್ ಜಿಲ್ಲಾ ಆಯುಕ್ತ ರಾಮಶೇಷ ಶೆಟ್ಟಿ, ಉಪಾಧ್ಯಕ್ಷ ವಸಂತ ಕುಮಾರ್, ಕಾರ್ಯದರ್ಶಿ ಸಂತೋಷ್ ಕುಮಾರ್ ಕದ್ರಿ, ಕೋಶಾ ಧಿಕಾರಿ ವಾಸುದೇವ ಬೋಳೂರು, ಮಂತ್ರ ಸರ್ಫ್‌ ಕ್ಲಬ್ ತರಬೇತುದಾರ ರಾಮ್ ಮೋಹನ್ ಮುಖ್ಯ ಅತಿಥಿಗಳಾಗಿದ್ದರು.

ಉಡುಪಿಯ ರೇಶ್ಮಾ, ಪುತ್ತೂರಿನ ರಕ್ಷಿತ್ ಅನಿಸಿಕೆ ವ್ಯಕ್ತ ಪಡಿಸಿದರು. ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಸರ್ವೋತ್ತಮ ಅಂಚನ್ ಸ್ವಾಗತಿಸಿ ಪ್ರಾಸ್ತಾವಿಸಿದರು. ಕ್ಯಾಂಪ್ ನಾಯಕ ಅನಲೇಂದ್ರ ಶರ್ಮ ವರದಿ ವಾಚಿಸಿದರು. ಸವಿತಾ ಕಾರ್ಯಕ್ರಮ ನಿರ್ವಹಿಸಿದರು.

ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ನಿರಂತರ ತೊಡಗಿಸುವ ಮೂಲಕ ರಾಷ್ಟ್ರದ ಅತ್ಯುತ್ತಮ ಪ್ರಜೆಗಳಾಗಿ ಮೂಡಿ ಬರಲು ಸಾಧ್ಯವಿದೆ
ಹರಿಕೃಷ್ಣ ಪುನರೂರು,
ಕ.ಸಾ.ಪ ಮಾಜಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.