ADVERTISEMENT

ರಸ್ತೆ ಅಡಚಣೆ: ಗ್ರಾಮಸ್ಥರಿಂದ ಗ್ರಾ.ಪಂ ವಾಸ್ತವ್ಯ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2012, 5:50 IST
Last Updated 22 ಮಾರ್ಚ್ 2012, 5:50 IST

ಸುಬ್ರಹ್ಮಣ್ಯ: ಸುಬ್ರಹ್ಮಣ್ಯದಿಂದ ಅಗರಿಕಜೆ -ಕುಡ್ತಡ್ಕ ಮೂಲಕ ದೇವರಗದ್ದೆಗೆ ಹೋಗುವ ದಾರಿ ವಿವಾದವನ್ನು ಪರಿಹರಿಸಲು ಆಗ್ರಹಿಸಿ ಈ ದಾರಿಯ 150ಕ್ಕೂ ಮಿಕ್ಕಿ ಫಲಾನುಭವಿಗಳುಬುಧವಾರ ಸಂಜೆ ಸುಬ್ರಹ್ಮಣ್ಯ ಗ್ರಾ.ಪಂ.ಕಚೇರಿಯಲ್ಲಿ ವಾಸ್ತವ್ಯ ಹೂಡಿ ನ್ಯಾಯಕ್ಕಾಗಿ ಆಗ್ರಹಿಸಿದರು.

ಜಿ.ಪಂ. ಸದಸ್ಯ ಕೆ.ಎಸ್ ದೇವರಾಜ್, ತಾ.ಪಂ.ಸದಸ್ಯೆ ವಿಮಲಾ ರಂಗಯ್ಯ, ಗ್ರಾ.ಪಂ.ಅಧ್ಯಕ್ಷ ಭಾಸ್ಕರ ಪೂಜಾರಿ, ಸದಸ್ಯರಾದ ಕೃಷ್ಣಮೂರ್ತಿ ಭಟ್, ಹರೀಶ್ ಇಂಜಾಡಿ, ಲಕ್ಷ್ಮಿ, ಉಪಠಾಣಾಧಿಕಾರಿ ಕುಶಾಲಪ್ಪ ಗೌಡ, ಎಪಿಎಂಸಿ ಸದಸ್ಯ ಸತೀಶ್ ಕೂಜುಗೋಡು, ವಕೀಲ ಶ್ರೀ ಹರಿ, ಸ್ಥಾಯಿ ಸಮಿತಿ ಸದಸ್ಯ ಮೋಹನದಾಸ ರೈ ಇತರರ ಉಪಸ್ಥಿತಿಯಲ್ಲಿ ಶುಕ್ರವಾರದ ಒಳಗೆ ಬೇಲಿ ಸರಿಪಡಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು ಮತ್ತು ನಾಗರಿಕರಿಗೆ ಸೂಕ್ತ ರಕ್ಷಣೆ ಒದಗಿಸಲಾಗುವುದು ಎಂದು ಠಾಣಾಧಿಕಾರಿ ವೆಂಕಟ್ರಮಣ ಗೌಡ ಭರವಸೆ ನೀಡಿದ ಬಳಿಕ ವಾಸ್ತವ್ಯ್ನ ಮೊಟಕುಗೊಳಿಸಲಾಯಿತು.

ಸಮಸ್ಯೆ ಪರಿಹಾರಕ್ಕಾಗಿ ಭಜನೆ: ಈ ರಸ್ತೆ ವಿವಾದಕ್ಕೆ ಸುಬ್ಬಮ್ಮ ರಾಮಣ್ಣ ಮತ್ತು ಶೇಷಪ್ಪ ಗೌಡರವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದು, ರಸ್ತೆ ವಿವಾದ ಮುಗಿಯದ ಹಿನ್ನೆಲೆಯಲ್ಲಿ ಸುಮಾರು 24 ದಿನಗಳಿಂದ ಈ ರಸ್ತೆಯಲ್ಲಿ ಆ ಭಾಗದ ಜನರು ಸಂಜೆ 6ರಿಂದ 9ರವರೆಗೆ ಭಜನೆ ಮಾಡುವುದರ ಮೂಲಕ ದೇವರಲ್ಲಿ ನ್ಯಾಯಕ್ಕಾಗಿ ಮೊರೆ ಹೋಗಿದ್ದೇವೆ. ರಸ್ತೆ ಅಗಲಗೊಳ್ಳುವವರೆಗೆ ನಮ್ಮ ಭಜನಾ ಕಾರ್ಯಕ್ರಮ ನಿರಂತರವಾಗಿ ಮುಂದುವರಿಯಲಿದೆ ಎಂದು ಶಿವರಾಮ ರೈ, ರಸ್ತೆ ಹೋರಾಟ ಸಮಿತಿಯ ಅಧ್ಯಕ್ಷ ವಿವೇಕಾನಂದ, ಕಾರ್ಯದರ್ಶಿ ಶೇಷಕುಮಾರ ಶೆಟ್ಟಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.