ADVERTISEMENT

ವಿದೇಶಿ ವಲಸಿಗರನ್ನು ಹೊರಹಾಕಿ: ಮುತಾಲಿಕ್

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2012, 8:50 IST
Last Updated 20 ಆಗಸ್ಟ್ 2012, 8:50 IST

ಮಂಗಳೂರು: ಅಸ್ಸಾಂನಲ್ಲಿ ನಡೆಯುತ್ತಿರುವ ಹಿಂಸೆ ಹಿಂದೂ-ಮುಸ್ಲಿಮರ ನಡುವಿನ ಸಂಘರ್ಷವಾಗಿರದೆ ಭಾರತೀಯರು ಮತ್ತು ದೇಶದ್ರೋಹಿಗಳ ನಡುವಿನ ಘರ್ಷಣೆಯಾಗಿದೆ. ದೇಶದಲ್ಲಿರುವ ಪಾಕಿಸ್ತಾನ ಮತ್ತು ಬಾಂಗ್ಲಾ ಪ್ರಜೆಗಳನ್ನು ಪತ್ತೆಹಚ್ಚಿ ಹೊರಹಾಕುವುದೇ ಇದಕ್ಕೆ ಇರುವ ಪರಿಹಾರ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಅಸ್ಸಾಂನಲ್ಲಿ ಅಕ್ರಮ ವಲಸಿಗರಿಂದಾಗಿ ಮೂಲ ನಿವಾಸಿಗಳು ಅಲ್ಲಿ ಅಲ್ಪಸಂಖ್ಯಾತರಾಗುತ್ತಿದ್ದಾರೆ. ಈ ವಿಚಾರದಲ್ಲಿ ಪ್ರಧಾನಿ ಮನ್‌ಮೋಹನ್ ಸಿಂಗ್ ಅವರು `ಮಂ~ಮೋಹನ್ ಸಿಂಗ್ ಆಗಿದ್ದಾರೆ. ರಾಜ್ಯದಲ್ಲೂ ಬಾಂಗ್ಲಾದೇಶದ 30 ಸಾವಿರ ಅಕ್ರಮ ವಾಸಿಗಳಿದ್ದಾರೆ.
 
ಬಾಂಗ್ಲಾದ 3 ಸಾವಿರ ವೇಶ್ಯೆಯರು ರಾಜ್ಯದಲ್ಲಿ ಕಾರ್ಯಾಚರಿಸುತ್ತ ಎಚ್‌ಐವಿ/ ಏಡ್ಸ್ ಹಬ್ಬಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇಂತಹ ಅಕ್ರಮ ವಾಸಿಗಳನ್ನು ಗುರುತಿಸಿ ರಾಜ್ಯ ಗೃಹ ಸಚಿವಾಲಯಕ್ಕೆ ವರದಿ ಸಲ್ಲಿಸುವ ಕಾರ್ಯವನ್ನು ಶ್ರೀರಾಮ ಸೇನೆ ಶೀಘ್ರ ನಡೆಸಲಿದೆ ಎಂದು ಅವರು ಭಾನುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಹೋಂ ಸ್ಟೇ ಘಟನೆಗೆ ಸಂಬಂಧಿಸಿದಂತೆ ರಾಜ್ಯ ಮಹಿಳಾ ಆಯೋಗದ ವರದಿಯನ್ನು ಸ್ವಾಗತಿಸಿದ ಅವರು, ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು. ಜತೆಗೆ ಜಿಲ್ಲೆಯಲ್ಲಿರುವ ಅಕ್ರಮ ಹೋಂ ಸ್ಟೇಗಳು, ರೇವ್ ಪಾರ್ಟಿ, ಪಬ್‌ಗಳ  ಬಗ್ಗೆ ಪೊಲೀಸರು ಕೂಲಂಕಷ ತನಿಖೆ ನಡೆಸಬೇಕು ಎಂದರು.

ಪಾಕಿಸ್ತಾನದ ನಟಿ ವೀಣಾ ಮಲ್ಲಿಕ್ ಐಎಸ್‌ಐ ಏಜೆಂಟ್ ಆಗಿದ್ದು, ಅವರು ನಟಿಸಿರುವ ಡರ್ಟಿ ಸಿನಿಮಾವನ್ನು ರಾಜ್ಯದಲ್ಲಿ ಬಿಡುಗಡೆ ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ ಎಂದರು.ಶ್ರೀರಾಮ ಸೇನೆ ರಾಜ್ಯ ಅಧ್ಯಕ್ಷ ಪ್ರಸಾದ್ ಅತ್ತಾವರ, ಪ್ರಧಾನ ಕಾರ್ಯದರ್ಶಿ ಮಹೇಶ್ ಕೊಪ್ಪ, ವಿಭಾಗ ಸಂಚಾಲಕ ಕುಮಾರ್ ಮಾಲೆಮಾರ್, ಜಿಲ್ಲಾ ಅಧ್ಯಕ್ಷ ಮಧುಸೂದನ್ ಉರ್ವಸ್ಟೋರ್ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.