ADVERTISEMENT

ವಿಶ್ವಕರ್ಮ ಸಮಾಜ ಇತರ ಸಮಾಜಕ್ಕೆ ಮಾದರಿ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2013, 9:31 IST
Last Updated 19 ಸೆಪ್ಟೆಂಬರ್ 2013, 9:31 IST

ಬ್ರಹ್ಮಾವರ: ವಿಶ್ವಕರ್ಮ ಸಮಾಜ ಇತರ ಸಮಾಜಕ್ಕೆ ಮಾದರಿಯಾಗಿದೆ ಎಂದು ಕುಂದಾಪುರದ ಡಾ.ಸವಿತಾ ಗಣೇಶ್ ಹೇಳಿದರು.
ಸಾಲಿಗ್ರಾಮದ ವಿಶ್ವಕರ್ಮ ಸಭಾಂಗಣದಲ್ಲಿ ಸೋಮವಾರ ಕೋಟ ವಿರಾಡ್ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘ, ವಿಶ್ವಕರ್ಮ ಕಲಾವೃಂದ ಸಾಲಿಗ್ರಾಮ, ಸಾಲಿಗ್ರಾಮದ ವಿಶ್ವಜ್ಯೋತಿ ಮಹಿಳಾ ಬಳಗ ಹಮ್ಮಿಕೊಂಡಿದ್ದ ವಿಶ್ವಕರ್ಮ ಯಜ್ಞ­ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೋಟ ವಿರಾಡ್ವಿಶ್ವ ಬ್ರಾಹ್ಮಣ ಸಮಾಜೋದ್ದಾರಕ ಸಂಘದ ಅಧ್ಯಕ್ಷ ಚೆಂಪಿ ಜನಾರ್ದನ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಲಲಿತಾ ಕಲಾ ಅಕಾಡೆಮಿ ಸದಸ್ಯ ಪಿ.ಎನ್.ಆಚಾರ್ಯ, ಕಟಪಾಡಿ ಆನೆಗುಂದಿ ಜಗದ್ಗುರು ಮಹಾಸಂಸ್ಥಾನ ಸರಸ್ವತಿ ಪೀಠ ಪ್ರತಿಷ್ಠಾನದ ಅಧ್ಯಕ್ಷ ತ್ರಾಸಿ ಸುಧಾಕರ ಆಚಾರ್ಯ, ವಿದ್ಯಾನಿಧಿ ಕಾರ್ಕಡ ಗೋಪಾಲಕೃಷ್ಣ ಆಚಾರ್ಯ, ವಿಶ್ವಕರ್ಮ ಕಲಾವೃಂದದ ಅಧ್ಯಕ್ಷ ಮಣೂರು ಸುಬ್ರಾಯ ಆಚಾರ್ಯ, ವಿಶ್ವಜೋತಿ ಮಹಿಳಾ ಘಟಕದ ಅಧ್ಯಕ್ಷೆ ಶಶಿಕಲಾ ಲಕ್ಷ್ಮೀಕಾಂತ್ ಶರ್ಮ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಲೋಹಶಿಲ್ಪಿ ಕೊಳ್ಕೆಬೈಲು ಮಂಜಯ್ಯ ಆಚಾರ್ಯ ದಂಪತಿ, ಟೈಲರ್ ವೃತ್ತಿಯಲ್ಲಿ ಚೆಂಪಿ ಕೇಶವ ಆಚಾರ್ಯ ದಂಪತಿ, ದಾರು ಶಿಲ್ಪಿ ಹಂಗಾರಕಟ್ಟೆಯ ದಾಮೋದರ ಆಚಾರ್ಯ ದಂಪತಿ, ಪಾಂಡೇಶ್ವರ ಶಿಲ್ಪಿ ಸೀತಾರಾಮ್ ಆಚಾರ್ಯ ದಂಪತಿ ಮತ್ತು ಚೆಂಪಿ ಕೆ.ಕೇಶವ ಆಚಾರ್ಯ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಕಡ ಬಿ.ಎ.ರುದ್ರಯ್ಯ ಆಚಾರ್ಯ ಅವರನ್ನು ಅಭಿನಂದಿಸಲಾಯಿತು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.

ಕಲಾವೃಂದದ ಅಧ್ಯಕ್ಷ ಮಣೂರು ಸುಭ್ರಾಯ ಆಚಾರ್ಯ ಸ್ವಾಗತಿಸಿದರು. ಕೇಶವ ಆಚಾರ್ಯ ಸಾಸ್ತಾನ ವಂದಿಸಿದರು. ಅಜಿತ್ ಕುಮಾರ ಕೋಟ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.