ಸುಬ್ರಹ್ಮಣ್ಯ: ಧಾರ್ಮಿಕ ಕೇಂದ್ರಗಳಿಗೆ ಕೊಡುಗೆ ನೀಡುವುದು ಜೀವನದ ಶ್ರೇಷ್ಠ ಕಾರ್ಯವಾಗಿದೆ. ಶ್ರದ್ಧಾಕೇಂದ್ರಗಳು ಸಂಸ್ಕೃತಿ ಮತ್ತು ನಂಬಿಕೆಗಳ ಆಲಯವಾಗಿದ್ದು, ಇಲ್ಲಿಗೆ ಬರುವ ಸಹಸ್ರಾರು ಭಕ್ತರ ಅನುಕೂಲತೆಗಾಗಿ ಒದಗಿಸುವ ಸೇವೆಗಳು ನಮಗೆ ಬದುಕಿನಲ್ಲಿ ಒದಗುವ ಭಾಗ್ಯವಾಗಿದೆ. ದೇವರಿಂದ ನಾವು ಪಡೆದುಕೊಳ್ಳುತ್ತೇವೆ. ದೇವಳಕ್ಕೆ ನೀಡುವ ಕೊಡುಗೆ ದೇವರಿಗೆ ನೀಡಿದ ಕೊಡುಗೆಯಾಗುತ್ತದೆ.
ಆರಾಧನೆಯುಕ್ತ ಜೀವನವನ್ನು ಮೈಗೂಡಿಸಿಕೊಂಡರೆ ನೆಮ್ಮದಿ ಪ್ರಾಪ್ತಿಯಾಗುತ್ತದೆ ಎಂದು ಶಾಸಕ ಎಸ್.ಅಂಗಾರ ಹೇಳಿದರು.
ಶುಕ್ರವಾರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸಮಗ್ರ ಮಾಹಿತಿಯ ವೆಬ್‌ಸೈಟ್ ಅನಾವರಣ ಮತ್ತು ಇ-–ಸೇವೆಗಳ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ದೇವಳದ ವತಿಯಿಂದ ನೂತನವಾಗಿ ರಚಿಸಿದ ಭಕ್ತಾದಿಗಳು ಓಡಾಡುವ ಪಥವನ್ನು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತೆ ಎಂ.ವಿ.ಸಾವಿತ್ರಿ ಉದ್ಘಾಟಿಸಿದರು. ಈ ಸಮಾರಂಭದಲ್ಲಿ ಇ–ವ್ಯವಸ್ಥೆಯನ್ನು ದೇವಳಕ್ಕೆ ಸೇವಾ ರೂಪದಲ್ಲಿ ಒದಗಿಸಿದ ಉದ್ಯಮಿ ಅರ್ಜುನ್.ಯು.ಕೆ ಅವರನ್ನು ಆಯುಕ್ತರು ಸನ್ಮಾನಿಸಿದರು.
ದೇವಳದ ಧರ್ಮಸಮ್ಮೇಳನ ಮಂಟಪದಲ್ಲಿ ನಡೆದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಜಿ.ಪಂ.ಅಧ್ಯಕ್ಷ ಕೊರಗಪ್ಪ ನಾಯ್ಕ್ ವಹಿಸಿದ್ದರು. ತಾ.ಪಂ.ಅಧ್ಯಕ್ಷೆ ಗುಣವತಿ ಕೊಲ್ಲಂತ್ತಡ್ಕ, ತಾ.ಪಂ.ಸದಸ್ಯೆ ವಿಮಲಾ ರಂಗಯ್ಯ, ಗಾ.ಪಂ.ಅಧ್ಯಕ್ಷೆ ಪುಷ್ಪಾವತಿ ದೇವರಗದ್ದೆ, ದಾನಿಗಳಾದ ಅರ್ಜುನ್ ಯು.ಕೆ ಮುಖ್ಯ ಅತಿಥಿಗಳಾಗಿದ್ದರು.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ್ ಮಡ್ತಿಲ, ಕಾರ್ಯನಿರ್ವಹಣಾಧಿಕಾರಿ ನಾಗರಾಜ್, ದಾನಿಗಳ ಮಾತಾಪಿತರಾದ ಉದಯಕುಮಾರ್ ಮತ್ತು ಪ್ರತಿಮಾ, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಚಂದ್ರಶೇಖರ ತಳೂರ್, ಸುಬ್ರಹ್ಮಣ್ಯ ಭಟ್, ಮೋಹನ್ ರಾಂ ಸುಳ್ಳಿ, ಕಿಶೋರ್ ಶಿರಾಡಿ, ಮೋನಪ್ಪ ಮಾನಾಡು, ಯಮುನಾ ರೈ,ವನಜಾ. ವಿ ಭಟ್ ವೇದಿಕೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.