ADVERTISEMENT

ಸಿಇಟಿ: ಕೇರಳ ವಿದ್ಯಾರ್ಥಿಗಳಿಗೆ 11 ಬಸ್‌

​ಪ್ರಜಾವಾಣಿ ವಾರ್ತೆ
Published 28 ಜುಲೈ 2020, 16:53 IST
Last Updated 28 ಜುಲೈ 2020, 16:53 IST

ಮಂಗಳೂರು: ಕರ್ನಾಟಕದ ಸಿಇಟಿ ಪರೀಕ್ಷೆಗೆ ಹಾಜರಾಗುವ ಕೇರಳದ ವಿದ್ಯಾರ್ಥಿಗಳಿಗಾಗಿ ಇದೇ 30 ಮತ್ತು 31 ರಂದರು ಕಾಞಂಗಾಡಿನಿಂದ 11 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.

ಬೆಳಿಗ್ಗೆ 5.30ರಿಂದ ಪ್ರತಿ ನಿಮಿಷಕ್ಕೆ ಒಂದರಂತೆ 11 ಬಸ್‌ಗಳನ್ನು ಓಡಿಸಲಾಗುವುದು. 6 ಬಸ್‌ಗಳು ಕಾಞಂಗಾಡ– ಮಾವುಂಗಾಲ್‌– ಚೆರ್ಕಳ ಮಾರ್ಗದಲ್ಲಿ ಹಾಗೂ 5 ಬಸ್‌ಗಳು ಕಾಞಂಗಾಡ– ಚಂದ್ರಗಿರಿ ಮಾರ್ಗದಲ್ಲಿ ಸಂಚರಿಸಲಿವೆ. ವಿದ್ಯಾರ್ಥಿಗಳು ಎಲ್ಲಿಂದಾದರೂ ಬಸ್‌ನಲ್ಲಿ ಪ್ರಯಾಣಿಸಬಹುದು. ವಿದ್ಯಾರ್ಥಿಗಳು ಎಲ್ಲಿ ಕೈತೋರಿದರೂ ನಿಲುಗಡೆ ಮಾಡಲು ಚಾಲಕರಿಗೆ ಆದೇಶ ನೀಡಲಾಗಿದೆ. ವಿದ್ಯಾರ್ಥಿಗಳನ್ನು ತಲಪಾಡಿಯಲ್ಲಿ ಇಳಿಸಲಾಗುವುದು ಎಂದು ಕಾಸರಗೋಡು ಜಿಲ್ಲಾಧಿಕಾರಿ ಡಾ.ಡಿ.ಸಜಿತಬಾಬು ತಿಳಿಸಿದ್ದಾರೆ.

ಪರೀಕ್ಷೆ ಮುಗಿಸಿ ಮರಳುವ ವಿದ್ಯಾರ್ಥಿಗಳಿಗೆ ಸಂಜೆ 5 ಗಂಟೆಯಿಂದ ತಲಪಾಡಿಯಿಂದ ಕಾಞಂಗಾಡಿನವರೆಗೆ ಬಸ್‌ಗಳು ಸಂಚರಿಸಲಿವೆ. ಅಗತ್ಯ ಇದ್ದಲ್ಲಿ ವಿದ್ಯಾರ್ಥಿಗಳ ಪಾಲಕರೂ ಬಸ್‌ನಲ್ಲಿ ಜತೆಗೆ ಪ್ರಯಾಣಿಸಬಹುದು. ತಲಪಾಡಿಯಿಂದ ಕರ್ನಾಟಕ ಸರ್ಕಾರದ ವತಿಯಿಂದ ಬೆಳಿಗ್ಗೆ 7.30ರಿಂದ ಬಸ್‌ ಸೌಲಭ್ಯ ಕಲ್ಪಿಸಲಾಗಿದೆ. ಮಾಹಿತಿಗಾಗಿ ನಿಯಂತ್ರಣ ಕೊಠಡಿ ದೂ.ಸಂ. 04994–255001 ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.