ADVERTISEMENT

ಜಪ್ಪಿನಮೊಗರು 'ಜಯ-ವಿಜಯ’ ಜೋಡುಕರೆ ಕಂಬಳ: ಸುಧೀರ್ ದೇವಾಡಿಗ ‘ಡಬಲ್’ ಸಂಭ್ರಮ

ಕನೆಹಲಗೆ ವಿಭಾಗದ ಎಲ್ಲ ಜೊತೆಗೂ ಯಶಸ್ಸು

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2024, 5:38 IST
Last Updated 12 ಫೆಬ್ರುವರಿ 2024, 5:38 IST
ಜಪ್ಪಿನಮೊಗರು ಜಯ-ವಿಜಯ ಕಂಬಳದ ಹಗ್ಗ ಹಿರಿಯ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ ನಂದಳಿಕೆ ಶ್ರೀಕಾಂತ್ ಭಟ್‌ ಅವರ ಕೋಣಗಳು (ಬಲಭಾಗ) ಮುನ್ನುಗ್ಗಿದ ಪರಿ –ಪ್ರಜಾವಾಣಿ ಚಿತ್ರ/ಫಕ್ರುದ್ದೀನ್ ಎಚ್
ಜಪ್ಪಿನಮೊಗರು ಜಯ-ವಿಜಯ ಕಂಬಳದ ಹಗ್ಗ ಹಿರಿಯ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ ನಂದಳಿಕೆ ಶ್ರೀಕಾಂತ್ ಭಟ್‌ ಅವರ ಕೋಣಗಳು (ಬಲಭಾಗ) ಮುನ್ನುಗ್ಗಿದ ಪರಿ –ಪ್ರಜಾವಾಣಿ ಚಿತ್ರ/ಫಕ್ರುದ್ದೀನ್ ಎಚ್   

ಮಂಗಳೂರು: ಜಪ್ಪಿನಮೊಗರು ಜಯ–ವಿಜಯ ಜೋಡುಕರೆ ಕಂಬಳದ ಕನೆ ಹಲಗೆ ವಿಭಾಗದಲ್ಲಿ ಸ್ಪರ್ಧಿಸಿದ ಎಲ್ಲ 6 ಜೊತೆ ಕೋಣಗಳು ಕೂಡ ಯಶಸ್ಸು ಕಂಡವು. ಭಾನುವಾರ ಮುಕ್ತಾಯಗೊಂಡ ಕಂಬಳದಲ್ಲಿ ಎಲ್ಲ ಜೋಡಿಗಳಿಗೂ ಸಮಾನವಾಗಿ ಪ್ರಶಸ್ತಿ ಹಂಚಲಾಯಿತು.

ಸ್ಪರ್ಧೆಯಲ್ಲಿ ಬೋಳಾರ ತ್ರಿಶಾಲ್ ಕೆ ಪೂಜಾರಿ ಅವರ ಕೋಣಗಳನ್ನು ಓಡಿಸಿದ ಬೈಂದೂರು ಮಹೇಶ್ ಪೂಜಾರಿ ಹಲಗೆ ಮುಟ್ಟಿಸಿದ್ದರು. ಬಾರ್ಕೂರು ಶಾಂತಾರಾಮ ಶೆಟ್ಟಿ ಅವರ ಕೋಣಗಳನ್ನು ತೆಕ್ಕಟ್ಟೆ ಸುಧೀರ್ ದೇವಾಡಿಗ, ವಾಮಂಜೂರು ತಿರುವೈಲುಗುತ್ತು ಪ್ರವೀಣ್‌ಚಂದ್ರ ಆಳ್ವ ಅವರ ಕೋಣಗಳನ್ನು ಮಂದಾರ್ತಿ ಕೊಕ್ಕರ್ಣೆ ಸುರೇಶ್, ಹಂಕರಜಾಲು ಶ್ರೀನಿವಾಸ ಭಿರ್ಮಣ್ಣ ಶೆಟ್ಟಿ ಅವರ ಕೋಣಗಳನ್ನು ಬೈಂದೂರು ರಾಘವೇಂದ್ರ ಪೂಜಾರಿ, ಕಲ್ಲಿಮಾರ್ ಹೊಸಮನೆ ಪ್ರದ್ಯುಮ್ನ ರಾಜಾರಾಮ್ ರೈ ಅವರ ಕೋಣಗಳನ್ನು ಉಲ್ಲೂರು ಕಂದಾವರ ಗಣೇಶ್ ಮತ್ತು ಇಚ್ಲಂಗೋಡು ಗಡುಪಾಡಿ ಮನೆ ಪ್ರೇಮನಾಥ್ ಪೆರ್ಗಡೆ ಅವರ ಕೋಣಗಳನ್ನು ಬೈಂದೂರು ಭಾಸ್ಕರ ದೇವಾಡಿಗ ಓಡಿಸಿದ್ದರು.

ಅಡ್ಡ ಹಲಗೆ ವಿಭಾಗದಲ್ಲಿ ನಾರಾವಿ ಯುವರಾಜ್ ಜೈನ್ ಅವರ ಕೋಣಗಳು ಪ್ರಥಮ ಬಹುಮಾನ ಗೆದ್ದುಕೊಂಡವು. ಭಟ್ಕಳ ಹರೀಶ್ ಅವರು ಹಲಗೆ ಮುಟ್ಟಿಸಿದ್ದರು. ಪೆರಿಯಾವು ಗುತ್ತು ನವೀನ್‌ಚಂದ್ರ ಗಟ್ಟಿಯಾಳ್ ಅವರ ಕೋಣಗಳು ದ್ವಿತೀಯ ಸ್ಥಾನ ಗಳಿಸಿದವು. ತೆಕ್ಕಟ್ಟೆ ಸುಧೀರ್ ದೇವಾಡಿಗ ಹಲಗೆ ಮುಟ್ಟಿಸಿದ್ದರು.

ADVERTISEMENT

ಇತರ ವಿಭಾಗಗಳ ಪ್ರಶಸ್ತಿಗಳು: ಹಗ್ಗ ಹಿರಿಯ: ನಂದಳಿಕೆ ಶ್ರೀಕಾಂತ್ ಭಟ್ ಅವರ ‘ಎ’ ಕೋಣಗಳು–1 (ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ), ಕೂಳೂರು ಪೊಯ್ಯೆಲು ಪಿ.ಆರ್.ಶೆಟ್ಟಿ ಅವರ ಕೋಣಗಳು–2 (ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ); ಹಗ್ಗ ಕಿರಿಯ: ನೂಜಿಪ್ಪಾಡಿ ಚಂದ್ರಶೇಖರ ಹೊಳ್ಳ ‘ಬಿ’ ಕೋಣಗಳು–1 (ಓಡಿಸಿದವರು: ಬೈಂದೂರು ಮಂಜುನಾಥ ಗೌಡ), ಸುರತ್ಕಲ್ ಪಾಂಚಜನ್ಯ ಯೋಗಿಶ್ ಪೂಜಾರಿ ‘ಬಿ’ ಕೋಣಗಳು–2 (ಓಡಿಸಿದವರು: ಮಾಸ್ತಿಕಟ್ಟೆ ಸ್ವರೂಪ್).

ನೇಗಿಲು ಹಿರಿಯ: ವರಪಾಡಿ ಬಡಗುಮನೆ ದಿವಾಕರ ಚೌಟ ಅವರ ಕೋಣಗಳು–1 (ಓಡಿಸಿದವರು: ಪಟ್ಟೆ ಗುರುಚರಣ್), ಬೋಳದಗುತ್ತು ಸತೀಶ್ ಶೆಟ್ಟಿ ‘ಎ’ ಕೋಣಗಳು–2 (ಓಡಿಸಿದವರು: ನತೀಶ್ ಬಾರಾಡಿ); ನೇಗಿಲು ಕಿರಿಯ: ಉಡುಪಿ ಕೊರಂಗ್ರಪಾಡಿ ಪಡುಮನೆ ವೀರ್ ಕರ್ಣ ಪ್ರಭಾಕರ ಹೆಗ್ಡೆ ಅವರ ಕೋಣಗಳು–1 (ಓಡಿಸಿದವರು: ಸರಪಾಡಿ ಧನಂಜಯ ಗೌಡ), ಉಡುಪಿ ಬ್ರಹ್ಮಗಿರಿ ಪ್ರಥಮ್ ಗಣನಾಥ ಹೆಗ್ಡೆ ಅವರ ‘ಎ’ ಕೋಣಗಳು–2 (ಓಡಿಸಿದವರು: ಉಜಿರೆ ಹೊಸಮನೆ ಸ್ಪಂದನ್ ಶೆಟ್ಟಿ).

ಕಂಬಳದಲ್ಲಿ ಒಟ್ಟು 138 ಜೊತೆ ಕೋಣಗಳು ಪಾಲ್ಗೊಂಡಿದ್ದವು. ನೇಗಿಲು ಹಿರಿಯ ವಿಭಾಗದಲ್ಲಿ ಅತಿ ಹೆಚ್ಚು 70 ಜೊತೆ, ಅಡ್ಡಹಲಗೆ ವಿಭಾಗದಲ್ಲಿ ಅತಿ ಕಡಿಮೆ, 5 ಜೊತೆ ಕೋಣಗಳು ಇದ್ದವು. ನೇಗಿಲು ಹಿರಿಯ ವಿಭಾಗದಲ್ಲಿ 28 ಜೊತೆ, ಹಗ್ಗ ಕಿರಿಯ ವಿಭಾಗದಲ್ಲಿ 16 ಜೊತೆ ಮತ್ತು ಹಗ್ಗ ಹಿರಿಯ ವಿಭಾಗದಲ್ಲಿ 13 ಜೊತೆ, ಕನೆ ಹಲಗೆ ವಿಭಾಗದಲ್ಲಿ 6 ಜೊತೆ ಕೋಣಗಳು ಸ್ಪರ್ಧಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.