ಉಜಿರೆಯ ಜನಾರ್ದನಸ್ವಾಮಿ ದೇವಸ್ಥಾನದ ಮುಂಭಾಗ ನಿರ್ಮಾಣಗೊಳ್ಳುತ್ತಿರುವ ‘ಕೀರ್ತಿಶೇಷ ವಿಜಯರಾಘವ ಸ್ಮಾರಕ ಗೋಪುರ’ಕ್ಕೆ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ಮಂಜೂರು ಮಾಡಿದ ₹ 15 ಲಕ್ಷದ ಡಿ.ಡಿ.ಯನ್ನು ಡಿ. ಹರ್ಷೇಂದ್ರ ಕುಮಾರ್ ಅವರು ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡ್ವೆಟ್ನಾಯ ಅವರಿಗೆ ಹಸ್ತಾಂತರಿಸಿದರು.
ಉಜಿರೆಯ ಜನಾರ್ದನಸ್ವಾಮಿ ದೇವಸ್ಥಾನದ ಮುಂಭಾಗ ನಿರ್ಮಾಣಗೊಳ್ಳುತ್ತಿರುವ ‘ಕೀರ್ತಿಶೇಷ ವಿಜಯರಾಘವ ಸ್ಮಾರಕ ಗೋಪುರ’ಕ್ಕೆ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ಮಂಜೂರು ಮಾಡಿದ ₹ 15 ಲಕ್ಷದ ಡಿ.ಡಿ.ಯನ್ನು ಡಿ. ಹರ್ಷೇಂದ್ರ ಕುಮಾರ್ ಅವರು ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡ್ವೆಟ್ನಾಯ ಅವರಿಗೆ ಹಸ್ತಾಂತರಿಸಿದರು. ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್, ಮೋಹನ ಕುಮಾರ್, ರವಿ ಚಕ್ಕಿತ್ತಾಯ, ರಾಘವೇಂದ್ರ ಬೈಪಾಡಿತ್ತಾಯ, ರವೀಂದ್ರ ಶೆಟ್ಟಿ, ಮಂಜುನಾಥ ಕಾಮತ್ ಜತೆಗಿದ್ದರು
ಬಳ್ಳಮಂಜ: ಬಸದಿಯಲ್ಲಿ ವಾರ್ಷಿಕೋತ್ಸವ, ವಿಶೇಷ ಪೂಜೆ
ಉಜಿರೆ: ಬೆಳ್ತಂಗಡಿ ತಾಲ್ಲೂಕಿನ ಬಳ್ಳಮಂಜ ಗ್ರಾಮದಲ್ಲಿರುವ ಶ್ರೀಪಾರ್ಶ್ವನಾಥ ಸ್ವಾಮಿ ಬಸದಿಯ ಜೀರ್ಣೋದ್ಧಾರ ಪ್ರತಿಷ್ಠಾ ಮಹೋತ್ಸವದ 39ನೇ ವಾರ್ಷಿಕೋತ್ಸವದ ಅಂಗವಾಗಿ ಮೇ 3ರಂದು ಬೆಳಿಗ್ಗೆಯಿಂದ ಭಗವಾನ್ ಪಾರ್ಶ್ವನಾಥ ಸ್ವಾಮಿಗೆ 24 ಕಲಶಾಭಿಷೇಕ, ಅಷ್ಟವಿಧಾರ್ಚನೆ ಪೂಜೆ, ಜಿನಭಜನೆ, ಮಹಾಪೂಜೆ ಆಯೋಜಿಸಲಾಗಿದೆ ಎಂದು ನಿವೃತ್ತ ಪ್ರಾಂಶುಪಾಲ ಕೆ.ರಾಜವೀರ ಇಂದ್ರ ತಿಳಿಸಿದ್ದಾರೆ.
ಅಳಿಯೂರು ಆದಿರಾಜ ಜೈನ್ ನೇತೃತ್ವದಲ್ಲಿ ಸಂಗೀತ ಮತ್ತು ಭಜನೆಯೊಂದಿಗೆ ಹನ್ನೆರಡು ವ್ರತಗಳ ಪೂಜೆ ನಡೆಯಲಿದೆ.
ಧಾರ್ಮಿಕ ಸಭೆ: ಭಾರತೀಯ ಜೈನ್ ಮಿಲನ್ ಮಂಗಳೂರು ವಲಯದ ಉಪಾಧ್ಯಕ್ಷ ಸುದರ್ಶನ್ ಜೈನ್ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ನಾರಾವಿ ಅಜಿತ್ ಕುಮಾರ್ ಜೈನ್ ಧಾರ್ಮಿಕ ಉಪಾನ್ಯಾಸ ನೀಡುವರು ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.