ಪುತ್ತೂರು: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಬ್ಯಾಗಿನಲ್ಲಿದ್ದ ₹9.94 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಪರ್ಸ್ ಕಳುವಾದ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಂಟ್ವಾಳ ತಾಲ್ಲೂಕಿನ ವಿಟ್ಲ ಸಮೀಪದ ಕಾನಡ್ಕ ನಿವಾಸಿ ಹರೀಶ್ ಅವರ ಪತ್ನಿ ರೇಷ್ಮಾ ಪರ್ಸ್ ಕಳಕೊಂಡವರು. ಪರ್ಸ್‌ನಲ್ಲಿ ಒಟ್ಟ 136 ಗ್ರಾಂ ತೂಕದ ಚಿನ್ನಾಭರಣವಿತ್ತು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ರೇಷ್ಮಾ ಅವರು ಸೋಮವಾರ ಪುತ್ರಿಯೊಂದಿಗೆ ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮೈಸೂರಿಗೆ ತೆರಳುವ ಬಸ್ಸನ್ನೇರಿದ್ದರು. ಬಸ್ ಟಿಕೆಟ್ ಮಾಡುವ ವೇಳೆ ಚಾಲಕನಿಗೆ ಉಚಿತ ಪ್ರಯಾಣಕ್ಕಾಗಿ ಬ್ಯಾಗಿನಿಂದ ಆಧಾರ್ ಕಾರ್ಡ್ ತೆಗೆದು ತೋರಿಸುವ ವೇಳೆ ಬ್ಯಾಗಿನೊಳಗಿದ್ದ ಚಿನ್ನಾಭರಣವಿದ್ದ ಪರ್ಸ್ ಕಳವಾಗಿರುವುದು ಅವರ ಗಮನಕ್ಕೆ ಬಂತು. ಈ ವಿಚಾರವನ್ನು ಅವರು ಬಸ್ ನಿರ್ವಾಹಕರ ಗಮನಕ್ಕೆ ತಂದು ಬಸ್ಸಿನಲ್ಲಿದ್ದ ಪ್ರಯಾಣಿಕರಲ್ಲಿ ಈ ಕುರಿತು ವಿಚಾರಿಸದರೂ ಪ್ರಯೋಜನವಾಗಿಲ್ಲ. ಬಳಿಕ ಪರ್ಸ್ ಕಳವಾಗಿರುವ ಕುರಿತು ಪುತ್ತೂರು ನಗರ ಠಾಣೆಯ ಪೊಲೀಸರಿಗೆ ದೂರು ನೀಡಿದರು.
ಪುತ್ತೂರು: ಮಹಿಳೆಯೊಬ್ಬರು ಸ್ನಾನಗೃಹದಲ್ಲಿ ಕುಸಿದುಬಿದ್ದು ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ದೇವಿನಗರದ ಜನತಾ ಕಾಲೋನಿಯಲ್ಲಿ ನಡೆದಿದೆ. ಕೆಯ್ಯೂರು ಗ್ರಾಮದ ದೇವಿನಗರ ಜನತಾ ಕಾಲೋನಿಯ ನಿವಾಸಿ ಅಣ್ಣು ಅವರ ಪತ್ನಿ ಲಲಿತಾ (42) ಮೃತ ಮಹಿಳೆ.
ಮೃತರ ಸಹೋದರ ಐತ್ತಪ್ಪ ಎಂಬವರು ನೀಡಿದ ದೂರಿನಂತೆ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.