ಮೂಡುಬಿದಿರೆ: ‘ಸಂಘ, ಸಂಸ್ಥೆಗಳಲ್ಲಿ ಜವಾಬ್ದಾರಿಯುತ ಹುದ್ದೆಯನ್ನು ನಿರ್ವಹಿಸಲು ಹಣವೇ ಮುಖ್ಯ ಅಲ್ಲ. ಪ್ರೀತಿ, ವಿಶ್ವಾಸ ಹಾಗೂ ಸೇವಾ ಮನೋಭಾವದಿಂದ ಕೆಲಸ ಮಾಡಿದಾಗ ಅಧಿಕಾರ, ಸ್ಥಾನಮಾನ ಅರಸಿಕೊಂಡು ಬರುತ್ತದೆ’ ಎಂದು ಲಯನ್ಸ್ ಕ್ಲಬ್ ಜಿಲ್ಲಾ ಪೂರ್ವ ರಾಜ್ಯಪಾಲ ವಸಂತ ಕುಮಾರ್ ಶೆಟ್ಟಿ ಹೇಳಿದರು.
ಬುಧವಾರ ನಡೆದ ಲಯನ್ಸ್ ಕ್ಲಬ್ ಮೂಡುಬಿದಿರೆಯ ಸುವರ್ಣ ಮಹೋತ್ಸವದ ನೂತನ ಪದಾಧಿಕಾರಿಗಳು ಹಾಗೂ ಲಿಯೊ ಕ್ಲಬ್‌ನ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿ ಮಾತನಾಡಿದರು.
ನೂತನ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆ ಮಾತನಾಡಿ, ಮೂಡುಬಿದಿರೆ ಲಯನ್ಸ್ ಕ್ಲಬ್‌ಗೆ 50 ವರ್ಷ ತುಂಬಿರುವುದರಿಂದ ಲಯನ್ಸ್ ಕ್ಲಬ್ ವತಿಯಿಂದ ಸಾರ್ವಜನಿಕ ಬಯಲು ರಂಗ ಮಂದಿರ ನಿರ್ಮಾಣದ ಯೋಜನೆ ಇದೆ ಎಂದರು.
ವೃದ್ದಾಶ್ರಮ ಕಟ್ಟಡಕ್ಕೆ ದೇಣಿಗೆ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಬಡರೋಗಿಗೆ ಚಿಕಿತ್ಸಾ ವೆಚ್ಚವನ್ನು ನೀಡಲಾಯಿತು. ಸುಖೇಶ್ ಶೆಟ್ಟಿ ಮತ್ತು ವಿನಯ ಕುಮಾರ್ ಶೆಟ್ಟಿ ಕ್ಲಬ್‌ಗೆ ನೂತನ ಸದಸ್ಯರಾಗಿ ಸೇರ್ಪಡೆಗೊಂಡರು.
ಕಾರ್ಯದರ್ಶಿ ಓಸ್ವಾಲ್ಡ್ ಡಿಕೋಸ್ತಾ, ಕೋಶಾಧಿಕಾರಿ ಹರೀಶ್ ತಂತ್ರಿ, ನಿಕಟಪೂರ್ವ ಅಧ್ಯಕ್ಷ ಬೋನವೆಂಚರ್ ಮೆನೇಜಸ್, ಪ್ರಾಂತ್ಯ ಅಧ್ಯಕ್ಷ ಜಗದೀಶ್ಚಂದ್ರ ಡಿ.ಕೆ, ವಲಯ ಅಧ್ಯಕ್ಷ ಜೊಸ್ಸಿ ಮಿನೇಜಸ್, ಪ್ರಾಂತ್ಯದ ಎಲ್ಲಾ ಎಂಟು ಕ್ಲಬ್ಗಳ ಅಧ್ಯಕ್ಷರು, ಲಿಯೋ ಕ್ಲಬ್ ಅಧ್ಯಕ್ಷ ಪ್ರಖ್ಯಾತ್ ಹೆಗ್ಡೆ ಕೆ., ಕಾರ್ಯದರ್ಶಿ ಸ್ವಯಂ ಎಸ್.ಪೂಜಾರಿ ಉಪಸ್ಥಿತರಿದ್ದರು. ವಿನೋದ್ ಕುಮಾರ್ ಮತ್ತು ದಯಾನಂದ ನಿರೂಪಿಸಿದರು. ವಿನೋದ್ ಡೇಸಾ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.