ವಿದ್ಯಾರ್ಥಿಗಳನ್ನು ಶಾಲೆಗೆ ಕರೆತರಲು ವಾಹನ ವ್ಯವಸ್ಥೆ, ಶಿಕ್ಷಕಿಯೇ ಈ ವಾಹನದ ಚಾಲಕಿ. ತಮ್ಮ ಮಕ್ಕಳಂತೆ ಈ ಶಾಲೆಯನ್ನು ಪೋಷಿಸುತ್ತಿರುವ ಸಮುದಾಯ. ಇದರಿಂದಾಗಿ ಮಾದರಿಯಾಗಿ ರೂಪುಗೊಂಡಿದೆ ಕೋಲ್ಚಾರು ಗ್ರಾಮದ ಸರ್ಕಾರಿ ಶಾಲೆ. ಕೋಲ್ಚಾರು ಗ್ರಾಮ ಇರುವುದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನಲ್ಲಿ. ಕೇರಳ ಗಡಿಗೆ ಹೊಂದಿಕೊಂಡಿರುವ ದಟ್ಟಾರಣ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ ಈ ಸುಂದರ ಶಾಲೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.