ADVERTISEMENT

ಆ್ಯಸಿಡ್ ದಾಳಿ: ಪರೀಕ್ಷೆ ಬರೆದ ವಿದ್ಯಾರ್ಥಿನಿಯರು

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2024, 5:15 IST
Last Updated 30 ಏಪ್ರಿಲ್ 2024, 5:15 IST

ಮಂಗಳೂರು: ಆ್ಯಸಿಡ್ ದಾಳಿ ವೇಳೆ ಗಾಯಗೊಂಡಿದ್ದ ಕಡಬ ಸರ್ಕಾರಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ಸೋಮವಾರದಿಂದ ಆರಂಭವಾಗಿರುವ ದ್ವಿತೀಯ ಪಿಯುಸಿ–2 ಪರೀಕ್ಷೆ ಬರೆದರು.

ಮಾರ್ಚ್ 4ರಂದು ದ್ವಿತೀಯ ಪಿ.ಯು ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿನಿಯೊಬ್ಬಳ ಮೇಲೆ ಆರೋಪಿ ಅಬಿನ್ ಎಂಬಾತ ಆ್ಯಸಿಡ್ ಎರಚಿದ್ದ. ಈ ವೇಳೆ ಆಕೆಯ ಜೊತೆಗಿದ್ದ ಇಬ್ಬರು ಸ್ನೇಹಿತರಿಗೂ ಆ್ಯಸಿಡ್‌ ತಾಗಿ ಗಾಯಗಳಾಗಿದ್ದವು. ಇವರಿಬ್ಬರು ಈಗ ಚೇತರಿಸಿಕೊಂಡಿದ್ದು, ದ್ವಿತೀಯ ಪಿಯುಸಿ ಎರಡನೇ ಹಂತದ ಪರೀಕ್ಷೆ ಬರೆದಿದ್ದಾರೆ ಎಂದು ಡಿಡಿಪಿಯು ಜಯಣ್ಣ ತಿಳಿಸಿದರು.

‘ಆ್ಯಸಿಡ್ ದಾಳಿಯ ಮುಖ್ಯ ಸಂತ್ರಸ್ತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯಲ್ಲಿದ್ದುಕೊಂಡೇ ಪರೀಕ್ಷೆ ಸಿದ್ಧತೆ ನಡೆಸಿರುವ ಅವರು ಏ.19ರಂದು ನಡೆದ ಸಿಇಟಿ ಪರೀಕ್ಷೆಗೆ ಹಾಜರಾಗಿದ್ದರು. ವಿಶೇಷ ಅನುಮತಿ ಮೇರೆಗೆ ಅವರಿಗೆ ಆಸ್ಪತ್ರೆ ಸಮೀಪ ಇರುವ ಪರೀಕ್ಷಾ ಕೇಂದ್ರಕ್ಕೆ ಬರಲು ಆಂಬುಲೆನ್ಸ್ ವ್ಯವಸ್ಥೆಗೊಳಿಸಲಾಗಿತ್ತು. ಆದರೆ, ಅವರಿಗೆ ದ್ವಿತೀಯ ಪಿಯು ಮಂಡಳಿ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಿಲ್ಲ. ಶಸ್ತ್ರಚಿಕಿತ್ಸೆ ಇರುವ ಕಾರಣಕ್ಕೆ ಈ ಬಾರಿ ಪರೀಕ್ಷೆ ಬರೆಯಲು ಆಗದು ಎಂದು ವಿದ್ಯಾರ್ಥಿನಿಯರ ಪಾಲಕರು ತಿಳಿಸಿದ್ದಾರೆ. ಪಿಯು–3ನೇ ಪರೀಕ್ಷೆಗೆ ಅವರು ಹಾಜರಾಗಬಹುದು’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.