ಕಾಸರಗೋಡು: ದೇಶದಲ್ಲಿ ಬಿಜೆಪಿಯನ್ನು ಎದುರಿಸಿ, ಕೋಮುವಿರೋಧಿ ನೀತಿ ಜಾರಿಗೊಳಿಸಲು ಕಾಂಗ್ರೆಸ್‌ಗೆ ಮಾತ್ರ ಸಾಧ್ಯ ಎಂದು ಎಐಸಿಸಿ ಮುಖಂಡ ರಮೇಶ್ ಚೆನ್ನಿತ್ತಲ ಹೇಳಿದರು.
ಈ ಬಾರಿಯ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಪಕ್ಷ ಸೋತಿರುವ ಬಗ್ಗೆ ಗಂಭೀರವಾಗು ಚಿಂತನೆ ನಡೆಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಮತ್ತು ಇತರ ಸಚಿವರು ನಡೆಸುತ್ತಿರುವ ನವಕೇರಳ ಯಾತ್ರೆ ಸರಣಿ ರಾಜ್ಯಕ್ಕೆ ನಷ್ಟ ಉಂಟುಮಾಡುತ್ತಿದೆ. ಸರ್ಕಾರದ ಹಣವನ್ನು ರಾಜಕೀಯ ಲಾಭಕ್ಕಾಗಿ ಬಳಸುವ ಷಡ್ಯಂತ್ರವಿದು. ಅಹವಾಲು ಸ್ವೀಕಾರ ಎಂಬುದು ಪ್ರಹಸನವಾಗುತ್ತಿದ್ದು, ಇದನ್ನು ಜನ ಗಮನಿಸುತ್ತಿದ್ದಾರೆ ಎಂದರು.
ಮುಖಂಡರಾದ ಕೆ.ಪಿ.ಕುಂಞಿಕಣ್ಣನ್, ಕೆ.ನೀಲಕಂಠನ್, ಪಿ.ಕೆ.ಫೈಝಲ್, ಪಿ.ಎ.ಅಶ್ರಫಾಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.