ADVERTISEMENT

‘ಜೇಡರ ದಾಸಿಮಯ್ಯ ಮಾರ್ಗಕಾರ’

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2021, 16:50 IST
Last Updated 17 ನವೆಂಬರ್ 2021, 16:50 IST
ಕಾಂತಾವರದಲ್ಲಿ ನಡೆದ ಅಲ್ಲಮಪ್ರಭು ಪೀಠದ ಕಾರ್ಯಕ್ರಮದಲ್ಲಿ ಡಾ.ಕೃಷ್ಣರಾಜ್‌ಗೆ ಡಾ.ನಾ ಮೊಗಸಾಲೆ ಪುಸ್ತಕ ನೀಡಿದರು. ಕಲ್ಲೂರು ನಾಗೇಶ್ ಇದ್ದರು.
ಕಾಂತಾವರದಲ್ಲಿ ನಡೆದ ಅಲ್ಲಮಪ್ರಭು ಪೀಠದ ಕಾರ್ಯಕ್ರಮದಲ್ಲಿ ಡಾ.ಕೃಷ್ಣರಾಜ್‌ಗೆ ಡಾ.ನಾ ಮೊಗಸಾಲೆ ಪುಸ್ತಕ ನೀಡಿದರು. ಕಲ್ಲೂರು ನಾಗೇಶ್ ಇದ್ದರು.   

ಮೂಡುಬಿದಿರೆ: ‘ವಚನಕಾರ ಜೇಡರ ದಾಸಿಮಯ್ಯ ಸರಳ ಭಾಷೆ ಬಳಸಿ ಅಷ್ಟೇ ಆಪ್ತವಾಗಿ, ವಿಶೇಷ ಅರ್ಥ ವ್ಯಾಪ್ತಿಯ ವಚನಗಳನ್ನು ರಚಿಸಿ ಮುಂದಿನ ವಚನಕಾರರಿಗೆ ಒಂದು ಪೀಠಿಕೆಯನ್ನು ನಿರ್ಮಿಸಿದವನು’ ಎಂದು ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ಸಹಪ್ರಾಧ್ಯಾಪಕ ಡಾ.ಕೃಷ್ಣರಾಜ ಕರಬ ಹೇಳಿದರು.

ಕಾಂತಾವರ ಅಲ್ಲಮಪ್ರಭು ಪೀಠದಲ್ಲಿ 'ಅನುಭವದ ನಡೆ ಅನುಭಾವದ ನುಡಿ'ಯ ನೂರನೇ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

‘ವೈದಿಕ ಧರ್ಮವನ್ನು ಎಲ್ಲಿಯೂ ನೇರವಾಗಿ ಖಂಡಿಸದೆ ಸಂಘಟಿತ ಮನೋಭಾವದಿಂದ ಸಮಾನತೆಯ ನೆಲೆಯಲ್ಲಿ ಎಲ್ಲರನ್ನೂ ಒಟ್ಟಿಗೆ ಸೇರಿಸಿಕೊಂಡು ಶೈವ ಸಿದ್ಧಾಂತವನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯವನ್ನು ಜೇಡರ ದಾಸಿಮಯ್ಯ ಮಾಡಿದ್ದಾನೆ’ ಎಂದು ಹೇಳಿದರು.

ADVERTISEMENT

ಪೀಠದ ಸ್ಥಾಪಕ ಪ್ರಧಾನ ನಿರ್ದೇಶಕ ಡಾ.ನಾ. ಮೊಗಸಾಲೆ, ಪೀಠದ ವಿಶ್ವಸ್ಥ ಕಲ್ಲೂರು ನಾಗೇಶ್, ಪ್ರಧಾನ ನಿರ್ದೇಶಕ ಸತೀಶ್ ಕುಮಾರ್ ಕೆಮ್ಮಣ್ಣು , ಸದಾನಂದ ನಾರಾವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.