ADVERTISEMENT

ಮೂಡುಬಿದಿರೆ: ಆಳ್ವಾಸ್ ಮಹಿಳಾ ತಂಡಕ್ಕೆ ಸಮಗ್ರ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 7:33 IST
Last Updated 8 ಡಿಸೆಂಬರ್ 2025, 7:33 IST
ತ್ರಿಶೂರ್‌ನಲ್ಲಿ ನಡೆದ ದಕ್ಷಿಣ ಭಾರತ ಅಂತರರಾಜ್ಯ ಅಶ್ಮಿತಾ ಖೇಲೊ ಇಂಡಿಯ ಮಹಿಳಾ ವೆಯ್ಟ್ ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಮೂಡುಬಿದಿರೆಯ ಆಳ್ವಾಸ್ ತಂಡ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿತು
ತ್ರಿಶೂರ್‌ನಲ್ಲಿ ನಡೆದ ದಕ್ಷಿಣ ಭಾರತ ಅಂತರರಾಜ್ಯ ಅಶ್ಮಿತಾ ಖೇಲೊ ಇಂಡಿಯ ಮಹಿಳಾ ವೆಯ್ಟ್ ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಮೂಡುಬಿದಿರೆಯ ಆಳ್ವಾಸ್ ತಂಡ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿತು   

ಮೂಡುಬಿದಿರೆ: ಕೇರಳದ ತ್ರಿಶೂರ್‌ನಲ್ಲಿ ನಡೆದ ದಕ್ಷಿಣ ಭಾರತದ ಅಂತರರಾಜ್ಯ ಅಸ್ಮಿತಾ ಖೇಲೊ ಇಂಡಿಯ ಮಹಿಳಾ ವೆಯ್ಟ್ ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಆಳ್ವಾಸ್ ಕಾಲೇಜಿನ ತಂಡವು ಸಮಗ್ರಚಾಂಪಿಯನ್‌ ಆಗಿ ಹೊರಹೊಮ್ಮಿದೆ.

ಈ ಮೂಲಕ ಕರ್ನಾಟಕ ರಾಜ್ಯ ತಂಡವನ್ನು ರಾಷ್ಟ್ರಮಟ್ಟದ ಪಂದ್ಯದಲ್ಲಿ ಪ್ರತಿನಿಧಿಸಲಿದೆ. ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು 2 ಚಿನ್ನ, 2 ಬೆಳ್ಳಿ, 3 ಕಂಚಿನ ಪದಕ ಸೇರಿ 7 ಪದಕಗಳನ್ನು ಗೆದ್ದುಕೊಂಡಿದ್ದಾರೆ.

ಚಿನ್ನದ ಪದಕಗಳಿಸಿದವರು: ಶ್ರಾವ್ಯ (48 ಕೆ.ಜಿ), ಪಾವನಿ-(77 ಕೆ.ಜಿ ಪ್ಲಸ್) ಬೆಳ್ಳಿಯ ಪದಕ ಗಳಿಸಿದವರು: ದೀಪಿಕಾ-(53 ಕೆ.ಜಿ), ಕಾಂಚನ-(58 ಕೆ.ಜಿ). ಕಂಚಿನ ಪದಕ ಗಳಿಸಿದವರು: ಪಲ್ಲವಿ-(44 ಕೆ.ಜಿ), ಹಂಸವೇಣಿ-(63 ಕೆ.ಜಿ), ಮಾನಸ-(77 ಕೆ.ಜಿ).

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.