ADVERTISEMENT

ಬೆಳ್ತಂಗಡಿ: ಪಿಲ್ಯ ಗೋಪಾಲಕೃಷ್ಣ ದೇವಸ್ಥಾನದ ವರ್ಷಾವಧಿ ಜಾತ್ರೆ ಸಂಪನ್ನ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2025, 3:13 IST
Last Updated 14 ಏಪ್ರಿಲ್ 2025, 3:13 IST
ಪಿಲ್ಯ ಗ್ರಾಮದ ಸೂಳಬೆಟ್ಟು ಬರಯ ಗೋಪಾಲಕೃಷ್ಣ ದೇವಸ್ಥಾನದ ವರ್ಷಾವಧಿ ಜಾತ್ರೆ ಪ್ರಯುಕ್ತ ದೇವರ ದರ್ಶನ ಬಲಿ ನಡೆಯಿತು
ಪಿಲ್ಯ ಗ್ರಾಮದ ಸೂಳಬೆಟ್ಟು ಬರಯ ಗೋಪಾಲಕೃಷ್ಣ ದೇವಸ್ಥಾನದ ವರ್ಷಾವಧಿ ಜಾತ್ರೆ ಪ್ರಯುಕ್ತ ದೇವರ ದರ್ಶನ ಬಲಿ ನಡೆಯಿತು   

ಬೆಳ್ತಂಗಡಿ: ಪಿಲ್ಯ ಗ್ರಾಮದ ಸೂಳಬೆಟ್ಟು ಬರಯ ಗೋಪಾಲಕೃಷ್ಣ ದೇವಸ್ಥಾನದ ವರ್ಷಾವಧಿ ಜಾತ್ರೆ ಏ.9ರಿಂದ 13ರವರೆಗೆ ತಂತ್ರಿ ಸಂತೋಷ್ ಕೇಳ್ಕರ್ ಅವರ ನೇತೃತ್ವದಲ್ಲಿ ನಡೆಯಿತು.

ಧ್ವಜಾರೋಹಣ, ಉತ್ಸವ, ಸಂಗೀತ ಕಾರ್ಯಕ್ರಮ, ಭಜನಾ ಸತ್ಸಂಗ, ವಸಂತ ಪೂಜೆ, ದರ್ಶನ ಬಲಿ, ಕಟ್ಟೆ ಪೂಜೆ, ನೃತ್ಯ ರೂಪಕ, ನಾಟಕ ಪ್ರದರ್ಶನ ನಡೆಯಿತು. ರಥಬೀದಿಯಲ್ಲಿ ನಿರ್ಮಿಸಲಾದ ಗಾಡ್ಗೀಳ್ ಕಲಾವೇದಿಕೆಯ ಉದ್ಘಾಟನೆ ನಡೆಯಿತು.

ಶನಿವಾರ ಕವಾಟೋದ್ಘಾಟನೆ, ಪುರುಷಸೂಕ್ತ ಹವನ, ಬಳಿಕ ರಥ ಕಲಶ, ರಥಾರೋಹಣ, ರಾತ್ರಿ ಅಳದಂಗಡಿ ಅರಮನೆ ಡಾ.ಪದ್ಮಪ್ರಸಾದ ಅಜಿಲ ಅವರ ಉಪಸ್ಥಿತಿಯಲ್ಲಿ ದೇವರ ಉತ್ಸವ ಬಲಿ, ಪಲ್ಲಕಿ ಉತ್ಸವ, ವಸಂತ ಕಟ್ಟೆಯಲ್ಲಿ ಅಷ್ಟಸೇವೆಗಳು, ಕೊಡಮಣಿತ್ತಾಯ ದೈವದ ನೇಮ, ಮಹಾ ರಥೋತ್ಸವ, ದೈವ-ದೇವರ ಭೇಟಿ ನೆರವೇರಿದವು. ಸಂಜೆ ಹನುಮಗಿರಿ ಮೇಳದವರಿಂದ ಯಕ್ಷಗಾನ ಬಯಲಾಟ ಪ್ರದರ್ಶಿನಗೊಂಡಿತು.

ADVERTISEMENT

ಆಡಳಿತ ಮೊಕ್ತೇಸರ ಎನ್.ಸದಾನಂದ ಸಹಸ್ರಬುದ್ಧೆ, ಸಹ ಮೊಕ್ತೇಸರರಾದ ಚಂದ್ರಕಾಂತ ಗೋರೆ, ದಯಾನಂದ ನಾತು, ಗಜಾನನ ನಾತು, ಪ್ರಭಾಕರ ಆಠವಳೆ, ಪದ್ಮನಾಭ ನಾತು, ಪುರುಷೋತ್ತಮ ತಾಮ್ಹನ್‌ಕರ್ ಭಾಗವಹಿಸಿದ್ದರು.

ಬ್ರಹ್ಮವಾಹಕರಾಗಿ ಪ್ರಕಾಶ್ ಹೊಳ್ಳ, ಅರ್ಚಕ ಪ್ರಸನ್ನ ಬರ್ವೆ ಸಹಕರಿಸಿದರು. ಮಂಗಳೂರಿನ ಇಸ್ಕಾನ್‌ನ ಸನಂದನ ದಾಸ್, ಅಳದಂಗಡಿ ಸತ್ಯದೇವತಾ ದೈವಸ್ಥಾನದ ಆಡಳ್ತೆದಾರ ಶಿವಪ್ರಸಾದ ಅಜಿಲ, ಡಾ.ಎನ್.ಎಂ.ತುಳಪುಳೆ, ಶೈಕ್ಷಣಿಕ ತರಬೇತುದಾರ ಸತೀಶ್ ಮರಾಠೆ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.