ADVERTISEMENT

ಕಾರ್ಮಿಕ ವಿರೋಧಿ ನೀತಿ– ಬಿಎಂಎಸ್‌ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 7:21 IST
Last Updated 26 ಫೆಬ್ರುವರಿ 2026, 7:21 IST
ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಂಗಳೂರಿನಲ್ಲಿ ಭಾರತೀಯ ಮಜ್ದೂರ್ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯವರು ಸಲ್ಲಿಸಿದ ಮನವಿಯನ್ನು ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಕೆ.  ಬುಧವಾರ ಸ್ವೀಕರಿಸಿದರು: ಪ್ರಜಾವಾಣಿ ಚಿತ್ರ
ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಂಗಳೂರಿನಲ್ಲಿ ಭಾರತೀಯ ಮಜ್ದೂರ್ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯವರು ಸಲ್ಲಿಸಿದ ಮನವಿಯನ್ನು ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಕೆ.  ಬುಧವಾರ ಸ್ವೀಕರಿಸಿದರು: ಪ್ರಜಾವಾಣಿ ಚಿತ್ರ   

ಮಂಗಳೂರು:ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಆರೋಪಿಸಿ ಭಾರತೀಯ ಮಜ್ದೂರ್ ಸಂಘ (ಬಿಎಂಎಸ್‌) ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯವರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. 

2020ರ ಕೈಗಾರಿಕಾ ಸಂಪರ್ಕ ಸಂಹಿತೆ, ವೃತ್ತಿಪರ ಸುರಕ್ಷತೆ ಆರೋಗ್ಯ ಮತ್ತು ಕೆಲಸದ ಸ್ಥಿತಿಗತಿಗಳ ಸಂಹಿತೆ ಹಾಗೂ 2020 ಕಾಯ್ದೆಗಳಲ್ಲಿರುವ ಕಾರ್ಮಿಕ ವಿರೋಧಿ ಅಂಶಗಳ ತಿದ್ದುಪಡಿ ತರಬೇಕು. ಕನಿಷ್ಠ ಪಿಂಚಣಿಯನ್ನು ₹7,500ಕ್ಕೆ ಹೆಚ್ಚಿಸಬೇಕು. ದರ ಏರಿಕೆ ಭತ್ಯೆ ಜಾರಿಗೊಳಿಸಬೇಕು. ಇಎಸ್‌ಐ ಮತ್ತು ಇಪಿಎಫ್‌ ಸವಲತ್ತು ಪಡೆಯಲು ಇರುವ ವೇತನ ಮಿತಿ ಹೆಚ್ಚಿಸಬೇಕು. ಆಶಾ, ಅಂಗನವಾಡಿ, ಬಿಸಿಯೂಟ ಹಾಗೂ ಎನ್ಎಚ್‌ಎಂ ಕಾರ್ಮಿಕರ ಗೌರವಧನ ಹೆಚ್ಚಿಸಬೇಕು. ರಾಜ್ಯ ರಸ್ತೆ ಸಾರಿಗೆ ನೌಕರರ 38 ತಿಂಗಳ ಬಾಕಿ ವೇತನ  ಪಾವತಿಸಬೇಕು’ ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಕೆ. ಹಾಗೂ ಪ್ರಾದೇಶಿಕ ಭವಿಷ್ಯ ನಿಧಿ ಉಪ ಆಯುಕ್ತ ಅಂಕಿತ್ ಸಿಂಗ್  ಮನವಿ ಸ್ವೀಕರಿಸಿದರು. ಬಿಎಂಎಸ್ ಜಿಲ್ಲಾ ಘಟಕದ ಅಧ್ಯಕ್ಷ  ಅನಿಲ್ ಕುಮಾರ್ ಯು., ಸತೀಶ್ ಶೆಟ್ಟಿ, ಜಯರಾಜ್ ಸಾಲ್ಯಾನ್, ವಿಜಯಲಕ್ಷ್ಮಿ, ಗೋಪಾಲಕೃಷ್ಣ, ರೋಹಿತಾಶ್ವ, ಉದಯ ಕುಮಾರ್, ವಿಗ್ನೇಶ್, ವೈ.ಸುಧೀಂದ್ರ, ನಿತ್ಯಾನಂದ ಪೈ, ರಂಜನ್, ಶಶಿಧರ್, ಉದಯ, ರವೀಂದ್ರ,  ದಿಲಾಕ್ಷಿ, ಉಷಾ ರೂಪೇಶ್, ರಘುಪತಿ, ಹರೀಶ್ ಜಿ.ಕೆ. ಮೊದಲಾದವರು ಭಾಗವಹಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.