ಬೆಳ್ತಂಗಡಿ: ಅಂಗಡಿಯಲ್ಲಿದ್ದ ಕಾರ್ಮಿಕನ ಗಮನ ಬೇರೆಡೆ ಸೆಳೆದು ಅಪರಿಚಿತರು ಲಕ್ಷಾಂತರ ರೂಪಾಯಿ ದೋಚಿದ ಘಟನೆ ಮಡಂತ್ಯಾರಿನಲ್ಲಿ ನಡೆದಿದೆ.
ಮಾಲಾಡಿ ಗ್ರಾಮದ ಮಡಂತ್ಯಾರು ನಾವುಂಡ ಕಡೆಗೆ ಹೋಗುವ ರಸ್ತೆಯಲ್ಲಿ ಅಡಿಕೆ ವ್ಯಾಪಾರ ನಡೆಸುತ್ತಿದ್ದು, ಜ.1ರಂದು ಬೆಳಿಗ್ಗೆ ಅಂಗಡಿಯಲ್ಲಿ ಕೆಲಸ ಮಾಡುವ ಇಸ್ಮಾಯಿಲ್ ಎಂಬುವರಲ್ಲಿ ಕ್ಯಾಷ್ ಡ್ರಾಯರ್‌ನ ಕೀಲಿಕೈ ನೀಡಿ, ಅನ್ಯ ಕೆಲಸದ ನಿಮಿತ್ತ ಹೊರಗೆ ಹೋಗಿದ್ದೆ. ಮಧ್ಯಾಹ್ನ ಸಮಯ ಅಂಗಡಿಯಲ್ಲಿದ್ದ ಇಸ್ಮಾಯಿಲ್ ಕರೆ ಮಾಡಿ, ಇಬ್ಬರು ಅಪರಿಚಿತರು ಸ್ಕೂಟರ್‌ನಲ್ಲಿ ಅಂಗಡಿಗೆ ಬಂದಿದ್ದು, ಗಮನ ಬೇರೆಡೆಗೆ ಸೆಳೆದು ಡ್ರಾಯರ್ ನಲ್ಲಿದ್ದ ₹ 2.31 ಲಕ್ಷ ಕಳವಾಗಿರುವುದು ಗೊತ್ತಾಗಿದೆ ಎಂದು ಮಾಲಾಡಿ ಗ್ರಾಮದ ಟಿ.ಪುಷ್ಪರಾಜ ಹೆಗ್ಡೆ ದೂರಿನಲ್ಲಿ ತಿಳಿಸಿದ್ದಾರೆ.
ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.