ಬಂಟ್ವಾಳ: ತಾಲ್ಲೂಕಿನಲ್ಲಿ ಸೋಮವಾರ ಮಳೆ ವಿರಳವಾಗಿದ್ದು ಬಿಸಿಲು ಕಾಣಿಸಿಕೊಂಡಿತ್ತು. ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ 7.4 ಮೀಟರ್‌ನಿಂದ 5.6 ಮೀಟರ್‌ಗೆ ಇಳಿದಿದೆ. ಕಳೆದ ಎರಡು ದಿನ ಬೀಸಿದ ಗಾಳಿಗೆ ವಿವಿಧೆಡೆ ಅಡಿಕೆ ಮರಗಳು ಮುರಿದು ಬಿದ್ದು ವ್ಯಾಪಕ ನಷ್ಟ ಉಂಟಾಗಿದೆ. ಸಿದ್ಧಕಟ್ಟೆ, ಸೋಣರ್ನಾಡು, ವಾಮದಪದವು, ಮಂಚಿಯಲ್ಲಿ ಅಡಿಕೆ ಮರಗಳು ಮುರಿದು ಬಿದ್ದಿದ್ದು, ನರಿಕೊಂಬು ಗ್ರಾಮದ ಬೋರುಗುಡ್ಡೆ ನಿವಾಸಿ ವಿಶ್ವನಾಥ ಪೂಜಾರಿ ಮನೆಗೆ ಮತ್ತು ಅಡಿಕೆ ತೋಟಕ್ಕೆ ಹಾನಿಯಾಗಿದೆ.
ಕಾಮಾಜೆ ರಸ್ತೆಗೆ ತೆಂಗಿನ ಮರ ಬಿದ್ದು ಮುಗ್ಡಲ್ ಗುಡ್ಡೆ ನಿವಾಸಿ ಸಂಜೀವ ಸಪಲ್ಯ ಎಂಬವರ ಮನೆ ಮೇಲೆಯೂ ಮರ ಉರುಳಿದೆ. ಪಲ್ಲಮಜಲು ನಿವಾಸಿ ಕಮಲಾ ಕೃಷ್ಣಪ್ಪ ಪೂಜಾರಿ ಮನೆಗೆ ಮರ ಬಿದ್ದು ಹಾನಿಯಾಗಿದ್ದು, ಅಮ್ಟಾಡಿ ಗ್ರಾಮದ ಬೆದ್ರಗುಡ್ಡೆ ಮತ್ತು ರಾಯಿ ಸಮೀಪದ ಕೈತ್ರೋಡಿ ಹಾಗೂ ಸೋರ್ಣಾಡುವಿನಲ್ಲಿ ವಿದ್ಯುತ್ ಕಂಬಳು ಮುರಿದು ಬಿದ್ದಿದೆ.
ಅಮ್ಮುಂಜೆ ಗ್ರಾಮದ ದೇವಕಿ ಅವರ ಮನೆಗೆ ಮರ ಬಿದ್ದು ಹಾನಿಯಾಗಿದ್ದು, ಕಲಾಯಿ ನಿವಾಸಿ ದೇವದಾಸ ಬೆಳ್ಚಡ ಅವರ ಮನೆಗೆ ಮರ ಬಿದ್ದಿದೆ. ನಾವೂರು ಗ್ರಾಮದ ಕೊಂಪೆ ನಿವಾಸಿ ವಸಂತ ಅವರ ಕೊಟ್ಟಿಗೆಗೆ ಮರ ಬಿದ್ದಿದೆ. ಶಂಭೂರು ಗ್ರಾಮದ ನರ್ಸರಕೋಡಿ ನಿವಾಸಿ ಬಾಬು ಸಪಲ್ಯ ಅವರ ಮನೆಗೆ ಮರ ಬಿದ್ದು ಹಾನಿಯಾಗಿದ್ದು, ಅಮ್ಟಾಡಿ ಗ್ರಾಮದ ದೇವಿನಗರ ನಿವಾಸಿ ಲೋಕಯ ಮೂಲ್ಯ ಅವರ ಮನೆಗೆ ತೆಂಗಿನ ಮರ ಬಿದ್ದು ಹಾನಿಯಾಗಿದೆ. ಕಳ್ಳಿಗೆ ಗ್ರಾಮದ ಪುರುಷೋತ್ತಮ ಅವರ ಮನೆಗೆ ಮರ ಬಿದ್ದು ಹಾನಿಯಾಗಿದ್ದು, ಮಂಚಿ ಗ್ರಾಮದ ಯಮುನಾ ಮೂಲ್ಯ ಮತ್ತು ಕೇಪು ಗ್ರಾಮದ ಚಿಮಿನಡ್ಕ ನಿವಾಸಿ ಮಹಮ್ಮದ್ ಎಂಬವರ ಮನೆಗೆ ಅಡಿಕೆ ಮರ ಬಿದ್ದು ಹಾನಿಯಾಗಿದೆ. ನರಿಕೊಂಬು ಗ್ರಾಮದ ಮಾಣಿಮಜಲು ನಿವಾಸಿ ಉಮೇಶ ಸಪಲ್ಯ ಅವರ ಮನೆಯ ಗೋಡೆ ಕುಸಿದ ಪರಿಣಾಮ ಅವರನ್ನು ಸ್ಥಳಾಂತರಿಸಲಾಗಿದೆ. ಅಮ್ಟೂರು ಗ್ರಾಮದ ಸಲೀಂ ಅವರ ಮನೆಗೆ ಮರ ಬಿದ್ದು ಹಾನಿಯಾಗಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.