ADVERTISEMENT

ಕುಂಬ್ರ: ಮೆಸ್ಕಾಂ ಕಚೇರಿ ಎಟಿಪಿ ಯಂತ್ರ ಮತ್ತೆ ಆರಂಭ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2024, 12:34 IST
Last Updated 18 ಏಪ್ರಿಲ್ 2024, 12:34 IST

ಪುತ್ತೂರು: ಕುಂಬ್ರ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಬಂದ್ ಮಾಡಿದ್ದ ವಿದ್ಯುತ್ ಬಿಲ್ ಸ್ವೀಕೃತಿ ಯಂತ್ರ (ಎಟಿಪಿ ಮೆಷಿನ್) ಅನ್ನು ಕುಂಬ್ರ ವರ್ತಕ ಸಂಘದ ಮನವಿ ಮತ್ತು ಪ್ರತಿಭಟನೆಯ ಎಚ್ಚರಿಕೆಯ ಹಿನ್ನಲೆಯಲ್ಲಿ ಮತ್ತೆ ಆರಂಭಿಸಲಾಗಿದೆ.

ಕುಂಬ್ರ ಮೆಸ್ಕಾಂ ಗ್ರಾಮಾಂತರ ಉಪವಿಭಾಗ ಕಚೇರಿಯಲ್ಲಿ ವಿದ್ಯುತ್ ಬಿಲ್ ಪಾವತಿಸುವ ಯಂತ್ರವನ್ನು ಕೆಲ ದಿನಗಳ ಹಿಂದೆ ಬಂದ್ ಮಾಡಲಾಗಿತ್ತು. ಕಚೇರಿಯಲ್ಲಿ ಬಿಲ್ ಪಾವತಿ ಮಾಡಲು ಮಧ್ಯಾಹ್ನ 3.30ರವರೆಗೆ ಮಾತ್ರ ಅವಕಾಶವಿದೆ. ವಿದ್ಯುತ್ ಬಿಲ್ ಸ್ವೀಕೃತಿ ಯಂತ್ರದ ಮೂಲಕ ಸಂಜೆ 5 ಗಂಟೆವರೆಗೂ ಬಿಲ್ ಪಾವತಿ ಮಾಡಲು ಅವಕಾಶವಿತ್ತು. ಬಿಲ್ ಸ್ವೀಕೃತಿ ಯಂತ್ರ ಬಂದ್ ಮಾಡಿರುವುದರಿಂದ ಗ್ರಾಹಕರಿಗೆ ತೊಂದರೆ ಆಗಿತ್ತು.

ಕುಂಬ್ರ ವರ್ತಕ ಸಂಘದ ಅಧ್ಯಕ್ಷ ರಫೀಕ್ ಅಲ್ರಾಯ, ಸಂಘದ ಸ್ಥಾಪಕಾಧ್ಯಕ್ಷ ಶ್ಯಾಮಸುಂದರ ರೈ ಕೊಪ್ಪಳ, ಕಾರ್ಯದರ್ಶಿ ಭವ್ಯಾ ರೈ, ಮಾಜಿ ಅಧ್ಯಕ್ಷ ದಿವಾಕರ ಶೆಟ್ಟಿ ನೇತೃತ್ವದ ನಿಯೋಗ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸಿ.ಎಚ್.ಶಿವಶಂಕರ್ ಅವರನ್ನು ಭೇಟಿಯಾಗಿ ಯಂತ್ರವನ್ನು ಮತ್ತೆ ಆರಂಭಿಸಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.