ಮೂಡುಬಿದಿರೆ: ತಾಲ್ಲೂಕಿನ ಎರಡನೇ ಪ್ರೌಢಶಾಲೆಯಾಗಿರುವ ಬಾಬುರಾಜೇಂದ್ರ ಪ್ರಸಾದ್ ಅನುದಾನಿತ ಹೈಸ್ಕೂಲ್‌ನ ಹೆಣ್ಣುಮಕ್ಕಳಿಗೆ ಸುಮಾರು 59 ವರ್ಷಗಳ ಬಳಿಕ ಹೊಸ ಶೌಚಾಲಯ ನಿರ್ಮಿಸಲಾಗಿದೆ.
ಈ ಹೈಸ್ಕೂಲ್ ಪ್ರಾರಂಭದ ಸಂದರ್ಭ ಬಾಲಕರು, ಬಾಲಕಿಯರಿಗೆ ಶೌಚಾಲಯ ನಿರ್ಮಿಸಲಾಗಿತ್ತು. ಶಿಥಿಲವಾಗಿದ್ದ ಶೌಚಾಲಯವನ್ನು ಒಂದು ಬಾರಿ ದುರಸ್ತಿ ಮಾಡಲಾಗಿತ್ತು. ಅನುದಾನದ ಕೊರತೆಯಿಂದ ಮತ್ತೆ ದುರಸ್ತಿ ಮಾಡಿರಲಿಲ್ಲ. ಆಡಳಿತ ಮಂಡಳಿ ಮನವಿಯಂತೆ ಮಂಗಳೂರಿನ ಎಂಸಿಎಫ್ ತನ್ನ ಸಿಎಸ್ಆರ್ ನಿಧಿಯಿಂದ ಬಾಬುರಾಜೇಂದ್ರ ಪ್ರೌಢಶಾಲೆಗೆ ಶೌಚಾಲಯ ನಿರ್ಮಿಸಿದ್ದು, ಅದನ್ನು ಶುಕ್ರವಾರ ಉದ್ಘಾಟಿಸಲಾಯಿತು.
ಉಚಿತ ವಾಹನ: ಮಕ್ಕಳು ಶಾಲೆಗೆ ಬಂದು ಹೋಗಲು ಎರಡು ಆಟೊ ರಿಕ್ಷಾಗಳಿದ್ದು, ಅದರ ವೆಚ್ಚವನ್ನು ದಾನಿಗಳು ನೋಡಿಕೊಳ್ಳುತ್ತಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಶಾಲಾ ಆಡಳಿತ ಮಂಡಳಿ ಅಧ್ಯಕ್ಷರು ತಲಾ ಒಬ್ಬ ಶಿಕ್ಷಕರ ತಿಂಗಳ ವೇತನ ನೀಡುತ್ತಿದ್ದಾರೆ. ಮುಖಂಡ ಅಭಯಚಂದ್ರ ಅವರು ಶಾಲಾಭಿವೃದ್ಧಿಗೆ ಈ ವರ್ಷ ₹ 1 ಲಕ್ಷ ನಗದು ನೀಡಿದ್ದಾರೆ.
ಕಲಿಕೆಗೆ ಪೂರಕವಾಗಿ ಸ್ಮಾರ್ಟ್ ಕ್ಲಾಸ್, ಪ್ರಯೋಗಾಲಯ, ಕಂಪ್ಯೂಟರ್ ತರಗತಿ, ಯಕ್ಷಗಾನ, ಸಂಗೀತ ತರಗತಿಗಳು ನಡೆಯುತ್ತಿವೆ. ಇಲ್ಲಿ ಮಕ್ಕಳಿಗೆ ಉಚಿತ ಶಿಕ್ಷಣ ಸಿಗುತ್ತಿದೆ.
ಆಡಳಿತ ಮಂಡಳಿ ಅಧ್ಯಕ್ಷ ಅಭಯಚಂದ್ರ, ಪ್ರಮುಖರಾದ ಸುರೇಶ್ ಪ್ರಭು, ರಾಪ್‌ಪ್ರಸಾದ್ ಭಟ್, ಮುಖ್ಯ ಶಿಕ್ಷಕಿ ತೆರೆಜಾ ಕಾರ್ಡೋಜಾ, ಶಿಕ್ಷಕ ಕಿರಣ್ ಕುಮಾರ್, ಶಿಕ್ಷಕರ ತಂಡ ಮಕ್ಕಳ ಕಲಿಕೆಗೆ ಒತ್ತು ನೀಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.