ADVERTISEMENT

ಸಂತೆಗದ್ದೆ: ಹಡಿಲು ಭೂಮಿ ಕೃಷಿ

ಉಪ್ಪಿನಂಗಡಿ ದೇವಸ್ಥಾನದ ಭೂಮಿಯಲ್ಲಿ ನೇಜಿ ನಾಟಿ

​ಪ್ರಜಾವಾಣಿ ವಾರ್ತೆ
Published 9 ಜುಲೈ 2021, 3:14 IST
Last Updated 9 ಜುಲೈ 2021, 3:14 IST
ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ಭೂಮಿಯಲ್ಲಿ ನೇಜಿ ನೆಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ಭೂಮಿಯಲ್ಲಿ ನೇಜಿ ನೆಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.   

ಉಪ್ಪಿನಂಗಡಿ: ಹಡಿಲು ಗದ್ದೆಯಲ್ಲಿ ಭತ್ತದ ಕೃಷಿ ಮಾಡಬೇಕೆಂಬ ಅಭಿಯಾನದ ಜೊತೆಗೆ ಇಲ್ಲಿನ ಸಹಸ್ರಲಿಂಗೇಶ್ವರ ದೇವಳದ ಸಂತೆ ಗದ್ದೆಯನ್ನೇ ಭತ್ತದ ಗದ್ದೆಯನ್ನಾಗಿಸುವ ಪ್ರಯತ್ನದ ಭಾಗವಾಗಿ, ಗುರುವಾರ ನೇಜಿ ನೆಡುವ ಕಾರ್ಯ ನಡೆಯಿತು.

ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಸಂಜೀವ ಮಠಂದೂರು ನೇಜಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿದರು. ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣ, ಅರ್ಚಕ ಹರೀಶ್ ಉಪಾಧ್ಯಾಯ, ಸದಸ್ಯರಾದ ಹರಿರಾಮಚಂದ್ರ, ಜಯಂತ ಪುರೋಳಿ, ಸುನಿಲ್, ಮಹೇಶ್ ಬಜತ್ತೂರು, ರಾಮ ನಾಯ್ಕ್, ಪ್ರೇಮಲತಾ, ಹರಿಣಿ, ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ಮುಳಿಯ, ಸದಸ್ಯರಾದ ಸುರೇಶ್ ಅತ್ರಮಜಲು, ಲೋಕೇಶ್ ಬೆತ್ತೋಡಿ, ಸಹಕಾರಿ ಸಂಘದ ಅಧ್ಯಕ್ಷ ಪ್ರಸಾದ್ ಕಾಯರ್ಪಾಡಿ, ಉಪಾಧ್ಯಕ್ಷ ಸುನಿಲ್ ಕುಮಾರ್ ದಡ್ಡು, ಕೃಷಿ ಅಧಿಕಾರಿ ಭರಮಣ್ಣ, ಧರ್ಮಸ್ಥಳ ಯೋಜನೆಯ ಕೃಷಿ ಯೋಜನಾಧಿಕಾರಿ ಉಮೇಶ್ ಪೂಜಾರಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಶಯನಾ ಜಯಾನಂದ, ಉಮೇಶ್ ಶೆಣೈ, ಮುಕುಂದ ಗೌಡ, ಲಕ್ಷ್ಮಣ್ ಗೌಡ ಬೆಳ್ಳಿಪ್ಪಾಡಿ, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರಾದ ಧನ್ಯಕುಮಾರ್ ರೈ, ರಾಮಚಂದ್ರ ಮಣಿಯಾಣಿ ಇದ್ದರು.

ಗದ್ದೆ ನಾಟಿಯಲ್ಲಿ ಮಹಿಳೆಯರು, ಉದ್ಯಮಿಗಳು ಒಳಗೊಂಡಂತೆ ಸಮಾಜದ ವಿವಿಧ ಸಮುದಾಯಗಳ ಜನರು ಪಾಲ್ಗೊಂಡರು. ಮೊದಲ ಬಾರಿಗೆ ನೇಜಿ ನೆಡುವ ಹೊಸ ಅನುಭವವನ್ನು ಹಂಚಿಕೊಂಡರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.